Home ಇದೀಗ ಬಂದ ಸುದ್ದಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

0
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

ಮಂಡ್ಯ,ಅ.21- ರಜೆ ಇದ್ದ ಕಾರಣ ಆಟವಾಡಲು ಹೋಗಿದ್ದ ಐವರು ಬಾಲಕರು ಕೆರೆಯಲ್ಲಿ ಈಜಲೆಂದು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಂಕರಪುರ ಗ್ರಾಮದ ರಂಜನ್ ಗೌಡ (14) ಹಾಗೂ ಮುತ್ತುರಾಜು (17) ಮೃತ ಬಾಲಕರು. ಇಬ್ಬರ ದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ರಂಜನ್ ಗೌಡ ಮುರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಮುತ್ತುರಾಜು ಸೋಮನಹಳ್ಳಿಯ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಈ ಇಬ್ಬರಿಗೂ ಈಜು ಬರುತ್ತಿರಲಿಲ್ಲ

ಎಲ್ಲರೂ ನೀರಿಗಿಳಿದು ಆಡುವಾಗು ಇಬ್ಬರು ಆಳ ಅರಿಯದೆ ಮುಂದೆ ಹೋಗಿ ಮುಳುಗಿದ್ದಾರೆ ಇದನ್ನು ಕಂಡ ಇತರ ಗೆಳೆಯರು ಆತಂಕಗೊಂಡು ರಕ್ಷಣೆಗೆ ಮುಂದಾದರು ಸಾಧ್ಯವಾಗಲಿಲ್ಲ. ಸುದ್ದಿ ತಿಳಿದು ಗ್ರಾಮಸ್ಥರು ದೇಶಹಳ್ಳಿ ಕೆರೆ ಬಳಿ ಜಮಾಹಿಸಿ ರಾತ್ರಿ ರಂಜನ್ ಗೌಡ ಮೃತ ದೇಹ ಪತ್ತೆ ಮಾಡಿದ್ದಾರೆ.ಆದರೆ ಸೋಮು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಬೆಳಿಗ್ಗೆ 8.30 ಕ್ಕೆ ಮುತ್ತುರಾಜು ದೇಹ ಪತ್ತೆಯಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.