Home ಇದೀಗ ಬಂದ ಸುದ್ದಿ ಪರಸ್ಪರ ಇರಿದುಕೊಂಡು ಸಾವನ್ನಪ್ಪಿದ ಇಬ್ಬರು ಸ್ನೇಹಿತರು

ಪರಸ್ಪರ ಇರಿದುಕೊಂಡು ಸಾವನ್ನಪ್ಪಿದ ಇಬ್ಬರು ಸ್ನೇಹಿತರು

0
ಪರಸ್ಪರ ಇರಿದುಕೊಂಡು ಸಾವನ್ನಪ್ಪಿದ ಇಬ್ಬರು ಸ್ನೇಹಿತರು
Death Murder

ನವದೆಹಲಿ,ಜು.14- ಸ್ನೇಹಿತರು ಪರಸ್ಪರ ಕಿತಾಡಿ ಒಬ್ಬರಿಗೊಬ್ಬರು ಚಾಕುವಿನಿಂದ ಇರಿದು ಕೊನೆಯುಸಿರೆಳೆದ ಘಟನೆ ಪಶ್ಚಿಮ ದೆಹಲಿಯ ಖ್ಯಾಲಾ ಪ್ರದೇಶದಲ್ಲಿ ನಡೆದಿದೆ.
ದೀರ್ಘಕಾಲ ಗೆಳೆಯರು ಘರ್ಷಣೆಯಲ್ಲಿ ತೊಡಗಿಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಖ್ಯಾಲಾದ ಬಿ ಬ್ಲಾಕ್‌ ನಿವಾಸಿಗಳಾದ ಇಬ್ಬರು ಉದ್ಯಾನವನದಲ್ಲಿ ಕುಳಿತಿದ್ದಾಗ ವಾಗ್ವಾದ ನಡೆದು ಜಗಳ ಪ್ರಾರಂಭವಾಯಿತು. ಇದು ವಿಕೋಪಕ್ಕೆ ತಿರುಗಿ ಬಡುಇದಾಟುತ್ತಾ ಚುಕುವಿನಿಂದ ಪರಸ್ಪರ ಚುಚ್ಚಿದ್ದಾರೆ.

ಇದನ್ನು ಕಂಡ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡ ಇಬ್ಬರನ್ನು ದೀನ್‌ ದಯಾಳ್‌ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ದರು,ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಖ್ಯಾಲಾ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

ಮೃತರು ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದ ಸ್ನೇಹಿತರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಯಾವ ವಿಷಯದಲ್ಲಿ ಕಿತ್ತಾಡಿದ್ದರೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಅಧಿಕಾರಿ ತಿಳಿಸಿದ್ದಾರೆ.