Home ಇದೀಗ ಬಂದ ಸುದ್ದಿ ನೀರು ತುಂಬಿದ ಕೊಳವೆ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ಸಾವು

ನೀರು ತುಂಬಿದ ಕೊಳವೆ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ಸಾವು

0
ನೀರು ತುಂಬಿದ ಕೊಳವೆ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ಸಾವು

ಸತ್ನಾ,ಜು.14-ಮಳೆ ನೀರು ತುಂಬಿದ್ದ ಪಾಳುಬಿದ್ದ ಕೊಳವೆ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರು ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಾಗೌಡ್‌ ತಹಸಿಲ್‌ನ ಹಿಲೌಂಧ ಗ್ರಾಮದಲ್ಲಿ ನಡೆದಿದೆ.ಸೋಮವತಿ (16) ಮತ್ತು ದುರ್ಗಾ (12) ಮೃತ ಬಾಲಕೀಯರಾಗಿದ್ದಾರೆ.

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಬಾಲಕೀಯರು ಕೊಳವೆ ಬಾವಿಗೆ ಬಿದ್ದಿದ್ದಾರೆ.ವಿಷಯ ತಿಳಿದು ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ರಾತ್ರಿ 16 ವರ್ಷದ ಬಾಲಕಿಯ ಶವವನ್ನು ಹೊರತೆಗೆಯಲಾಗಿದ್ದರೆ, ಮುಂಜಾನೆ 12 ವರ್ಷದ ಮತ್ತೊಬ್ಬ ಬಾಲಕಿಯ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗೌಡ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸಲೈಯಾ ಹಾರ್‌ ನಿವಾಸಿ ಛಗ್ಗು ಅಹಿರ್ವಾರ್‌ ಅವರ ಕುಟುಂಬ ಸದಸ್ಯರು ಹಿಲೌಂಧ ಗ್ರಾಮದ ಮಧ್ಯದಲ್ಲಿರುವ ಹೊಲದಲ್ಲಿ ಭತ್ತ ಬಿತ್ತಲು ಹೋಗಿದ್ದಾಗ ಈ ಘಟನೆ ನಡೆದಿದೆ. ಹೊಲದಲ್ಲಿ ನೀರು ಇದ್ದ ಕಾರಣ, ಅವರು ಕೊಳವೆ ಬಾವಿ ಬಗ್ಗೆ ತಿಳಿಯದೆ ದರೊಳಗೆ ಬಿದ್ದಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿ ಪಾಂಡೆ ಹೇಳಿದರು.

ಮಾಹಿತಿ ಪಡೆದ ನಂತರ, ನಾಗೌಡ್‌ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ ಜಿತೇಂದ್ರ ವರ್ಮಾ ತಕ್ಷಣ ಪೊಲೀಸ್‌‍ ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು.ಕತ್ತಲೆ ಮತ್ತು ಹೊಲದಲ್ಲಿ ನೀರಿನ ಅಡಚಣೆ ನಡುವೆ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆಯ ಡೈವರ್‌ಗಳನ್ನು ಕರೆಸಲಾಯಿತು ಎಂದು ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.

ರಾತ್ರಿ 9.30 ರ ಸುಮಾರಿಗೆ ಕೊಳವೆ ಬಾವಿಯಿಂದ ಒಬ್ಬರ ಶವವನ್ನು ಹೊರತೆಗೆಯಲಾಯಿತು. ತಡರಾತ್ರಿಯವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೊಬ್ಬ ಹುಡುಗಿಯ ಶವವನ್ನು ಸಹ ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು.ಕೊಳವೆ ಬಾವಿಯ ಹೊರಪದರವನ್ನು ತೆಗೆಯಲಾಗಿದ್ದು ಆ ಪ್ರದೇಶದಲ್ಲಿ ನೀರು ಸಂಗ್ರಹವಾದ ಕಾರಣ ಕೊಳವೆ ಬಾವಿ ಗೋಚರಿಸಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.ಮೃತದೇಹಗಳನ್ನು ನಾಗೌಡ್‌ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.