Saturday, July 27, 2024
Homeಕ್ರೀಡಾ ಸುದ್ದಿಉಗಾಂಡಾ ವಿರುದ್ಧ ವೆಸ್ಟ್ ಇಂಡೀಸ್‍ಗೆ 134 ರನ್‍ಗಳ ಜಯ

ಉಗಾಂಡಾ ವಿರುದ್ಧ ವೆಸ್ಟ್ ಇಂಡೀಸ್‍ಗೆ 134 ರನ್‍ಗಳ ಜಯ

ಪ್ರೋವಿಡೆನ್ಸ್, ಜೂನ್‌ 9-ಅದ್ಬುತ ಪ್ರದರ್ಶನ ನೀಡಿ ಎದುರಾಳಿ ಉಗಾಂಡಾ ತಂಡವನ್ನು ಮಣಿಸುವ ಮೂಲಕ ವೆಸ್ಟ್‌ ಇಂಡೀಸ್‌‍ ವಿಶ್ವಕಪ್‌ ಟಿ-20 ಪಂದ್ಯಾವಳಿಯಲ್ಲಿ ಮುನ್ನಡೆದಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌‍ ಆರಂಭದಲ್ಲಿ ಎಡವಿದರೂ ಅನುಭಾವಿ ಜಾನ್ಸನ್‌ ಚಾರ್ಲ್‌್ಸ (44) ಮತ್ತು ಆಂಡ್ರೆ ರಸೆಲ್‌ (30) ಅವರ ಸ್ಪೋಟಕ ಬ್ಯಾಟಿಂಗ್‌ನಿಂದ 5 ವಿಕಟ್‌ ನಷ್ಠಕ್ಕೆ 173 ರನ್‌ಗಳ ಸವಾಲಿನ ಮೊತ್ತವನ್ನು ಮುಂದಿಟ್ಟಿತ್ತು.

ಇದನ್ನು ಬೆನ್ನಟ್ಟಿದ ಉಗಾಂಡಾ ಬ್ಯಾಟ್‌್ಸಮನ್‌ಗಳು ಆರಂದಲ್ಲೇ ಎಡವಿದರು ವೇಗ ಹಾಗು ಸ್ಪಿನ್‌ ದಾಳಿಗೆ ತತ್ತರಿಸಿ ಕೇವಲ 12 ಓವರ್‌ಗಳಲ್ಲಿ 39 ರನ್‌ ಗಳಿಸಿ ಆಲ್‌ಔಟ್‌ ಆದರು. ಅಂತಿಮವಾಗಿ ವೆಸ್ಟ್‌ ಇಂಡೀಸ್‌‍ 134 ರನ್‌ಗಳ ಜಯದೊಂದಿಗೆ ಸಂಭ್ರಮಿಸುವುದರ ಜೊತೆಗೆ ಇದು ಪುರುಷರ ಟಿ-20 ವಿಶ್ವಕಪ್‌ನಲ್ಲಿ ಕಡಿಮೆ ಮೊತ್ತದ ಹೊಸ ದಾಖಲೆಯಾಯಿತು.

ವಿಂಡಿಸ್‌‍ ಪರ ಬೌಲಿಂಗ್‌ ಆರಂಭಿಸಿದ ವೇಗಿ ಹೋಸೇನ್‌ ಮೊದಲನೇ ಓವರ್‌ನ ಎರಡನೇ ಎಸೆತದಲ್ಲಿ ಉಗಾಂಡಾದ ಆರಂಭಿಕ ಬ್ಯಾಟ್‌್ಸಮನ್‌ ರೋಜರ್‌ ಮುಕಾಸಾ ಅವರ ವಿಕೆಟ್‌ ಉರುಳಿಸಿದರು.
ಇದೇ ವೇಳೆ ಎಡಗೈ ಸ್ಪಿನ್ನರ್‌ ಅಕೆಲ್‌ ಹೊಸೆನ್‌ ಅವರು ತಮ ಬೌಲಿಂಗ್‌ನಲ್ಲಿ ಚಂಡನ್ನು ಅದ್ಬುತವಾಗಿ ತಿರುಗಿಸಿದ ಲಯಕ್ಕೆ ಉಗಾಂಡಾ ಬ್ಯಾಟ್‌್ಸಮನ್‌ಗಳು ತಡಬಡಿಸಿದರು ಒಬ್ಬರ ನಂತರ ಒಬ್ಬರು ಪೆವಿಲಿಯನ್‌ ಪೆರೆಡ್‌ ನಡೆಸಿದ್ದರು.

ತಮ ವೃತ್ತಿಜೀವನದ ಅತ್ಯುತ್ತಮ ದಾಖಲೆ ಸೃಷ್ಠಿಸಿ ಕೇವಲ 11 ರನ್‌ ನೀಡಿ 5 ವಿಕಟ್‌ ಪಡೆದು ಎಲ್ಲರನ್ನು ಚಕಿತಗೊಳಿಸಿದರು ಇದು ವೆಸ್ಟ್‌ ಇಂಡೀಸ್‌‍ಗೆ ಎದುರಾಳಿ ಉಗಾಂಡಾವನ್ನು 12 ಓವರ್‌ಗಳಲ್ಲಿ ಕೇವಲ 39 ರನ್‌ಗಳಿಗೆ ಆಲ್‌ಔಟ್‌ ಮಾಡಲು ಸಹಾಯ ಮಾಡಿದರು. ಈ ಗೆಲುವು ವೆಸ್ಟ್‌ ಇಂಡೀಸ್‌‍ ತಂಡಕ್ಕೆ ರನ್‌ ರೇಟ್‌ 3.574 ಗೆ ಹೆಚ್ಚಿಸಿದೆ, ಟಾಪ್‌ 8 ಸ್ಥಾನ ಪಡೆಯುವ ಪ್ರಯತ್ನದಲ್ಲಿ ಇದು ಅವರಿಗೆ ಸಹಾಯವಾಗಲಿದೆ.

ಸ್ಕೋರ್‌ ಬೋರ್ಡ್‌
ವೆಸ್ಟ್‌ ಇಂಡೀಸ್‌‍:
ಬ್ರಾಂಡನ್‌ ಕಿಂಗ್‌ ಬಿ ರಾಮ್ಜಾನಿ (13)
ಜಾನ್ಸನ್‌ ಚಾರ್ಲ್‌್ಸ ಸಿ ರಾಮ್ಜಾನಿ ಬಿ ನಕ್ರಾನಿ (44)
ನಿಕೋಲಸ್‌‍ ಪೂರನ್‌ ಸಿ ಬಿ ಮಸಾಬ (22)
ರೋವ್‌ಮನ್‌ ಪೊವೆಲ್‌ ಸಿ ಒಬುಯಾ ಬಿ ಮಸಾಬಾ (23)
ರ್ಶೆೇನ್‌ ರುದರ್‌ೇರ್ಡ್‌ ಬಿ ಕ್ಯೆವುಟಾ (22)
ಆಂಡ್ರೆ ರಸೆಲ್‌ ಔಟಾಗದೆ -30
ರೊಮಾರಿಯೊ ಶೆರ್ಡ್‌ ಔಟಾಗದೆ- 5
ಹೆಚ್ಚುವರಿ ರನ್‌ಗಳು: 14
ಒಟ್ಟು: (5 ವಿಕೆಟ್‌ಗಳಿಗೆ, 20 ಓವರ್‌ಗಳಿಗೆ) 173
ವಿಕೆಟ್‌ ಪತನ: 1-41, 2-76, 3-105, 4-125, 5-140.
ಬೌಲಿಂಗ್‌‍: ಅಲ್ಪೇಶ್‌ ರಾಮ್ಜಾನಿ 3-0-16-1, ಕಾಸ್ಮಾಸ್‌‍ ಕ್ಯೆವುಟಾ 4-0-42-1, ಜುಮಾ ಮಿಯಾಗಿ 3-0-29-0, ್ರಾಂಕ್‌ ನ್ಸುಬುಗಾ 3-0-29-0, ಬ್ರಿಯಾನ್‌ ಮಸಾಬಾ 4-0-31- 2, ದಿನೇಶ್‌ ನಕ್ರಾಣಿ 3-0-20-1.

 ಉಗಾಂಡಾ:
 ರೋಜರ್‌ ಮುಕಾಸಾ ಎಲ್ಬಿಡಬ್ಲ್ಯೂ ಬಿ ಹೋಸೇನ್‌ (0)
 ಸೈಮನ್‌ ಸ್ಸೆಸಾಜಿ ಸಿ ಜೋಸೆ್‌‍ ಬಿ ಶೆರ್ಡ್‌ (4)
 ರಾಬಿನ್ಸನ್‌ ಒಬುಯಾ ಬಿ ರಸ್ಸೆಲ್‌ (6)
 ಅಲ್ಪೇಶ್‌ ರಾಮ್ಜಾನಿ ಎಲ್ಬಿಡಬ್ಲ್ಯೂ ಬಿ ಹೊಸೈನ್‌ (5)
 ಕೆನ್ನೆತ್‌ ವೈಸ್ವಾ ಎಲ್ಬಿಡಬ್ಲ್ಯೂ ಬಿ ಹೋಸೇನ್‌ (1)
 ರಿಯಾಜತ್‌ ಅಲಿ ಶಾ ಬಿ ಹೊಸೈನ್‌ (3)
 ದಿನೇಶ್‌ ನಕ್ರಾಣಿ ಬಿ ಹೊಸೈನ್‌ (0)
 ಬ್ರಿಯಾನ್‌ ಮಸಾಬ ಸಿ ಪೂರನ್‌ ಬಿ ಜೋಸೆ್‌‍ (1)
 ಜುಮಾ ಮಿಯಾಗಿ ಔಟಾಗದೆ -13
 ಕಾಸ್ಮಾಸ್‌‍ ಕ್ಯೆವುಟಾ ಎಲ್ಬಿಡಬ್ಲ್ಯೂ ಬಿ ಮೋಟಿ  (1)
 ್ರಾಂಕ್‌ ನ್ಸುಬುಗಾ ಬಿ ಜೋಸೆ್‌‍( 0)
 ಹೆಚ್ಚುವರಿ ರನ್‌ಗಳು-5
 ಒಟ್ಟು: (12 ಓವರ್‌ಗಳಲ್ಲಿ ಆಲೌಟ್‌‍) 39
 ವಿಕೆಟ್‌ ಪತನ: 1-0, 2-8, 3-15, 4-15, 5-19, 6-22, 7-23, 8-25, 9-34.
 ಬೌಲಿಂಗ್‌: ಅಕೇಲ್‌ ಹೊಸೈನ್‌ 4-0-11-5, ರೊಮಾರಿಯೊ ಶೆರ್ಡ್‌ 2-0-9-1, ಆಂಡ್ರೆ ರಸೆಲ್‌ 1-0-4-
1, ಅಲ್ಜಾರಿ ಜೋಸೆ್‌‍ 3-0-6-2, ಗುಡಾಕೇಶ್‌ ಮೋಟಿ 2-0-6-1.
RELATED ARTICLES

Latest News