Tuesday, July 1, 2025
Homeರಾಜಕೀಯ | Politicsಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ

ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ

Kolar MLAs talk Fight

ಬೆಂಗಳೂರು,ಜು.1- ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ರೀತಿಯ ಬಣ ರಾಜಕೀಯ ತಲೆ ಎತ್ತಿದ್ದು, ಶಾಸಕರಾದ ಕೆ.ವೈ.ನಂಜೇಗೌಡ ಮತ್ತು ಎಸ್‌‍.ಎನ್‌.ನಾರಾಯಣಸ್ವಾಮಿ ಅವರ ನಡುವೆ ಬಹಿರಂಗ ವಾಕ್ಸಮರ ಕಾವೇರಿತ್ತು.ಕೆಎಂಎಫ್‌ನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್‌‍.ಎನ್‌.ನಾರಾಯಣಸ್ವಾಮಿ ಪಕ್ಷಾಂತರಿ ಎಂದು ನಿಂದಿಸಿದರು.

ಇದಕ್ಕೆ ತಿರುಗೇಟು ನೀಡಿರುವ ನಂಜೇಗೌಡ, ನಮ ತಾತ ಕಾಂಗ್ರೆಸ್‌‍ ನಾಯಕರಾಗಿದ್ದರು. ನಾನು ಮೂಲತಃ ಕಾಂಗ್ರೆಸಿಗ. ಮಂಡಲ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಿಂದ ಎರಡು ಬಾರಿ ಶಾಸಕನಾಗಿದ್ದೇನೆ. ನಾರಾಯಣಸ್ವಾಮಿಗೆ ಗ್ರಹಚಾರ ನೆಟ್ಟಗಿಲ್ಲ. ತಲೆಕೆಟ್ಟಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ನಾನು ಯಾರ ವಿರುದ್ಧವೂ ದೂರು ನೀಡುವುದಿಲ್ಲ. ಕಾಂಗ್ರೆಸ್‌‍ ಕಾರ್ಯಕರ್ತರು ಅಥವಾ ಮುಖಂಡರು ತಪ್ಪು ಮಾಡಿದರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆಯೇ ಸರಿಪಡಿಸುವ ಪ್ರಯತ್ನವನ್ನು ಮಾಡುತ್ತೇನೆ. ಅದನ್ನು ಬಿಟ್ಟು ಬಹಿರಂಗ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೆಎಂಎಫ್‌ ಅಧ್ಯಕ್ಷ ಸ್ಥಾನದ ವಿಚಾರ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಆಗಿನ ಸಂಸದ ಡಿ.ಕೆ.ಸುರೇಶ್‌ ಅವರು ನನ್ನ ಜೊತೆ ಮಾತುಕತೆ ನಡೆಸಿದರು. ಗೆದ್ದಿರುವ ನಂಜೇಗೌಡರನ್ನು ಬಿಟ್ಟು ಸೋತಿರುವ ಭೀಮಾ ನಾಯಕರನ್ನು ಕೆಎಂಎಫ್‌ಗೆ ಅಧ್ಯಕ್ಷರನ್ನಾಗಿ ಮಾಡುವುದೇಕೆ ಎಂದು ಡಿ.ಕೆ.ಸುರೇಶ್‌ರವರು ನೇರವಾಗಿ ಪ್ರಶ್ನೆ ಮಾಡಿದ್ದರು. ಮುಂದಿನ ಅವಧಿಗೆ ನಿಮಗೇ ಅವಕಾಶ ಮಾಡಿಕೊಡುವುದಾಗಿ ನಮಗೆ ಭರವಸೆ ನೀಡಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಡಿ.ಕೆ.ಸುರೇಶ್‌ ರಾಜ್ಯಸಭಾ ಸದಸ್ಯರಾಗಬಹುದು, ಸಚಿವರಾಗಲೂ ಅವಕಾಶಗಳಿವೆ. ಕೆಎಂಎಫ್‌ನ ಅಧ್ಯಕ್ಷ ಸ್ಥಾನದಂತಹ ಹುದ್ದೆಗಳಿಗೆ ಅವರು ಆಸೆಪಡುವುದಿಲ್ಲ ಎಂಬುದು ನನ್ನ ನಿರೀಕ್ಷೆ. ಈ ಹಿಂದೆ ಡಿ.ಕೆ.ಸುರೇಶ್‌ರವರೇ ನನ್ನ ಪರವಾಗಿ ಧ್ವನಿಯೆತ್ತಿದ್ದರು. ಅದರಂತೆ ಈಗ ನನಗೆ ಅವಕಾಶ ಮಾಡಿಕೊಡಬಹುದು ಎಂದು ಕಾಯುತ್ತಿದ್ದೇನೆ. ಒಂದು ವೇಳೆ ಅವಕಾಶವಾಗದೇ ಇದ್ದರೆ ನಾನು ಇನ್ನೇನು ಮಾಡಲು ಸಾಧ್ಯ ಎಂದು ವಿಷಾದಿಸಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ನನ್ನ ಕ್ಷೇತ್ರದ 2,200 ಕೋಟಿ ರೂ.ಗಳ ಕಾಮಗಾರಿಗಳು ದೊರೆತಿವೆ. ಸಚಿವರು, ಮುಖ್ಯಮಂತ್ರಿಯವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾರಾಯಣಸ್ವಾಮಿ ಯಾವ ಕಾರಣಕ್ಕೆ ಜಿಲ್ಲಾ ಸಚಿವರ ವಿರುದ್ಧ ದೂರು ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿ ದರು.

RELATED ARTICLES

Latest News