ಬೆಂಗಳೂರು,ಸೆ.12- ಕ್ರಿಮಿನಲ್‌ಗಳ ಜೊತೆ ಗುರುತಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಎಚ್ಚರಿಸಿದ್ದಾರೆ.
ಥಣಿಸಂದ್ರದ ಸಿಎಆರ್ ಕವಾಯತು ಮೈದಾನದಲ್ಲಿಂದು ಹಮಿಕೊಂಡಿದ್ದ ಮಾಸಿಕ ಪರೇಡ್‌ನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ರಿಮಿನಲ್‌ಗಳ ಜೊತೆ ಸೇರಿಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ಯಾವ ಕಾರಣಕ್ಕೂ ಅಂತಹ ಸಿಬ್ಬಂದಿಯನ್ನು ಬಿಡುವು ದಿಲ್ಲ, ಪೊಲೀಸ್ ಇಲಾಖೆಗೆ ಸೇರಿದ್ದೀರಿ, ಒಂದು ಟೀಂ ಆಗಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.
ಬಂದೋಬಸ್ತ್ ವೇಳೆ ಮೊದಲು ನಿಮನ್ನು ನೀವು ರಕ್ಷಣೆ ಮಾಡಿಕೊಂಡು ಹೆಲೆಟ್, ಲಾಠಿ ಹಿಡಿದು ಕರ್ತವ್ಯದಲ್ಲಿ ತೊಡಗಿಕೊಂಡರೆ ಸಾರ್ವಜನಿಕರನ್ನು ರಕ್ಷಣೆ ಮಾಡಬಹುದು ಎಂದು ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಇತ್ತೀಚೆಗೆ ಬಂದೋಬಸ್ತ್‌ನಲ್ಲಿ ಯಾರೂ ಕೂಡ ಹೆಲೆಟ್ ಹಾಗೂ ಲಾಠಿ ತೆಗೆದುಕೊಂಡು ಹೋಗದಿರುವುದನ್ನು ಗಮನಿಸಿದ್ದೇನೆ. ಕಾಟಾಚಾರಕ್ಕೆ ನಿಂತರೆ ಆಗುವುದಿಲ್ಲ. ಪ್ರತಿ ಹಂತದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅತಿಮುಖ್ಯ. ಅಧಿಕಾರಿಗಳು ಬಂದೋಬಸ್ತ್ ಕರ್ತವ್ಯಕ್ಕೆ ಹೋಗುವ ಸಿಬ್ಬಂದಿಯನ್ನು ತಪಾಸಣೆ ಮಾಡಿ ಕಳುಹಿಸಬೇಕು ಎಂದರು.
ನೀವು ಕರ್ತವ್ಯಕ್ಕೆ ತೆರಳುವಾಗ ಸಮವಸ್ತ್ರ ಇದ್ದರೆ ಸಾಲುವುದಿಲ್ಲ, ಬಂದೋಬಸ್ತ್ ನೋಡಿಕೊಳ್ಳುವವರು ಆಯುಧಗಳ ಜೊತೆಗೆ ತೆರಳಬೇಕು. ನಗರಕ್ಕೆ ಕೆಎಸ್‌ಆರ್‌ಪಿ ತುಕಡಿ ಬಂದಾಗಲೂ ಸಹ ಕಡ್ಡಾಯವಾಗಿ ಲಾಠಿ, ಹೆಲೆಟ್ ಜೊತೆಯಲ್ಲಿರಬೇಕು ಎಂದು ಅವರು ಹೇಳಿದರು.
ಸರ್ಕಾರದ ಗೃಹ ಇಲಾಖೆಯಿಂದ ಪೊಲೀಸ್ ಇಲಾಖೆಗೆ ಸೌಲಭ್ಯಗಳು ಬರುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದೇ ರೀತಿ ಸಮಾಜಕ್ಕೆ ಒಳ್ಳೆಯ ರೀತಿ ಸೇವೆ ಮಾಡಲು ನೀವು ಕಾರಣರಾಗಬೇಕು ಎಂದು ಅವರು ತಿಳಿಸಿದರು.
ವೃತ್ತಿ ಆಧಾರಿತ ಹಾಗೂ ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸಬೇಕು. ಹಬ್ಬಗಳನ್ನು ಕುಟುಂಬದೊಂದಿಗೆ ಆಚರಿಸಿ, ಕರ್ತವ್ಯವಿದ್ದಾಗ ನಿಷ್ಠೆಯಿಂದ ಸೇವೆ ಸಲ್ಲಿಸಿ ಬೆಂಗಳೂರು ನಗರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಬೇಕು ಎಂದು ಸಿಬ್ಬಂದಿಗಳಿಗೆ ಕರೆ ನೀಡಿದರು.
ಪೊಲೀಸ್ ಸಿಬ್ಬಂದಿಗಳಿಗಾಗಿ ಆರೋಗ್ಯ ತಪಾಸಣೆಗಾಗಿ ಖುಷಿ ಅಭಿಯಾನ ಆರಂಭವಾಗಿದೆ. ಎಲ್ಲಾ ಸಿಬ್ಬಂದಿಯೂ ತಪಾಸಣೆ ಮಾಡಿಸಿಕೊಂಡು ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಯಾದರೆ ಮೂರು ತಿಂಗಳಿಗೊಮೆ ಈ ಅಭಿಯಾನವನ್ನು ಮಾಡಲಾಗುವುದು ಎಂದರು.
ಪ್ರತಿ ಶುಕ್ರವಾರ ಕಡ್ಡಾಯವಾಗಿ ಪೆರೇಡ್‌ನಲ್ಲಿ ಪಾಲ್ಗೊಳ್ಳಬೇಕು. ಪರೇಡ್ ಮಾಡುವುದರಿಂದ ಶಿಸ್ತು ಬರಲಿದೆ. ಪರೇಡ್ ಮೈದಾನಕ್ಕೆ ಬಂದ ತಕ್ಷಣ ತಾವು ತರಬೇತಿ ಸಮಯದಲ್ಲಿ ಕಲಿಸಿದ ಪಾಠವನ್ನು ನೆನಪಿಸಿಕೊಳ್ಳಬೇಕು. ಕಾನ್ಸ್ ಸ್ಟೇಬಲ್ ಮಟ್ಟದಿಂದ ಅಧಿಕಾರಿ ಮಟ್ಟದವರೆಗೂ ಪರೇಡ್‌ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲಾಖೆಯ ನಿಯಮಾನುಸಾರ ಎಷ್ಟು ಸಿಬ್ಬಂದಿ ಇರುತ್ತಾರೊ, ಅಷ್ಟು ಮಂದಿಯೂ ವೆಪನ್ ಡ್ರಿಲ್, ಲಾಠಿ ಡ್ರಿಲ್ ಮಾಡಬೇಕು ಎಂದು ಅವರು ಸೂಚಿಸಿದರು. ಇದಕ್ಕೂ ಮೊದಲು ಉತ್ತಮವಾಗಿ ಪರೇಡ್ ಮಾಡಿದ ಕಾನ್‌್ಸಸೇಬಲ್ ಹಾಗೂ ಅಧಿಕಾರಿ ವರ್ಗವನ್ನು ಆಯುಕ್ತರು ಶ್ಲಾಘಿಸಿದರು.