ಬೆಂಗಳೂರು,ಡಿ.31- ಉಗ್ರ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ-ಇಂಡಿಯಾ) ಚಟುವಟಿಕೆಗಳಿಗೆ ಉತ್ತೇಜನ ನೀಡಿದ ಸರಣಿ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆ ಜಹೀದುಲ್ ಇಸ್ಲಾಂ ಅಲಿಯಾಸ್ ಕೌಸರ್ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದ ಕೌಸರ್, 2014ರಲ್ಲಿ ಸಂಘಟನೆ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಸೇರಿ ಭಾರತ ಪ್ರವೇಶಿಸಿದ್ದರು. ಬಳಿಕ ಅದೇ ವರ್ಷ ಅಕ್ಟೋಬರ್ನಲ್ಲಿ ಕೊಲ್ಕೊತ್ತಾದ ಬುದ್ರ್ವಾನ್ ಸ್ಫೋಟ ನಡೆಸಿದ್ದರು. ಬಳಿಕ ತಮ ತಂಡಗಳನ್ನು ದಕ್ಷಿಣ ರಾಜ್ಯಗಳ ಕಡೆ ಬೇರ್ಪಡಿಸಿದ್ದ ಕೌಸರ್ ತನ್ನ ಕೆಲ ಸಹಚರರ ಜತೆ ಸೇರಿ ತುಮಕೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಇತರ ಸಣ್ಣ-ಪುಟ್ಟ ವ್ಯಾಪಾರಸ್ಥನ ಸೋಗಿನಲ್ಲಿ ಓಡಾಡಿಕೊಂಡಿದ್ದರು.
ಎನ್ಐಎ ಕೋಲ್ಕತ್ತಾ ಶಾಖೆಯು ಬುದ್ರ್ವಾನ್ ಸ್ಫೋಟ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಜೂನ್ 2019 ರಲ್ಲಿ ಬೆಂಗಳೂರು ನಗರ ಪೊಲೀಸರು ಆರಂಭಿಕವಾಗಿ ಪ್ರಕರಣ ದಾಖಲಿಸಿದ್ದರು. ಬಳಿಕ ಎನ್ಐಎ ತನಿಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಬಾಂಗ್ಲಾದೇಶದಲ್ಲಿ 2005ರಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು 2014 ರಲ್ಲಿ ಸಂಘಟನೆ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿದ್ದ ಜಹೀದುಲ್ ಇಸ್ಲಾಂ ಭಾರತ ಪ್ರವೇಶಿಸಿದ್ದ ಎಂದು ಎನ್ ಐಎ ತನಿಖೆಯಲ್ಲಿ ತಿಳಿದುಬಂದಿತ್ತು.
ಬುದ್ರ್ವಾನ್ ಸ್ಫೋಟ ಪ್ರಕರಣದ ತನಿಖೆಯ ಸಮಯದಲ್ಲಿ ಏಜೆನ್ಸಿಯ ಕೋಲ್ಕತ್ತಾ ಶಾಖೆಯ ಕಚೇರಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ 2019 ರ ಜೂನ್ನಲ್ಲಿ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ಎನ್ಐಎ ತನಿಖೆಯಲ್ಲಿ ದೊರೆತ ಮಾಹಿತಿಯ ಪ್ರಕಾರ, 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರ ವಶದಲ್ಲಿದ್ದ ಜಾಹಿದುಲ್, 2014ರಲ್ಲಿ ಜೆಎಂಬಿ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ. ಅದೇ ಸಂದರ್ಭದಲ್ಲಿ 2014 ರ ಬುದ್ರ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ.
ಬುದ್ರ್ವಾನ್ ಸ್ಫೋಟದ ನಂತರ, ಜಾಹಿದುಲ್ ಮತ್ತು ಸಹಚರರು ಬೆಂಗಳೂರಿಗೆ ಪರಾರಿಯಾಗಿದ್ದರು. ಬೆಂಗಳೂರಿನಲ್ಲಿದ್ದುಕೊಂಡೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮುಸ್ಲಿಂ ಯುವಕರಿಗೆ ಭಾರತ-ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಕುಮಕ್ಕು ನೀಡಿದ್ದರು.
ಸ್ಫೋಟದ ನಂತರ, ಜಹಿದುಲ್ ಮತ್ತು ಅವನ ಸಹಚರರು ಬೆಂಗಳೂರಿಗೆ ಬಂದಿದ್ದರು.
ಇಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಮುಸ್ಲಿಂ ಯುವಕರನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ನೇಮಕ ಮಾಡಿದ್ದರು. ಆರೋಪಿಗಳು ಮತ್ತು ಆತನ ಸಹಚರರು 2018ರ ಜನವರಿಯಲ್ಲಿ ಬೋಧಗಯಾದಲ್ಲಿ ಸ್ಫೋಟ ನಡೆಸಿದ್ದರು. ಆರೋಪಿಗಳು ಉಗ್ರ ಚಟುವಟಿಕ ಮುಂದುವರೆಸಲು ಡಕಾಯಿತಿ ಮೂಲಕ ಹಣವನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ತನಿಖೆಗಳು ಮತ್ತಷ್ಟು ಬಹಿರಂಗಪಡಿಸಿವೆ.
ಈ ಕಾರ್ಯಸೂಚಿಯ ಭಾಗವಾಗಿ 2018ರಲ್ಲಿ ಅವರು ಬೆಂಗಳೂರಿನಲ್ಲಿ ನಾಲ್ಕು ದರೋಡೆಗಳನ್ನು ಎಸಗಿದ್ದರು ಮತ್ತು ಲೂಟಿ ಮಾಡಿದ ಹಣವನ್ನು ಮದ್ದುಗುಂಡುಗಳನ್ನು ಸಂಗ್ರಹಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಡಗುತಾಣಗಳ ವ್ಯವಸ್ಥೆ ಮತ್ತು ತರಬೇತಿಗಾಗಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
2018 ರ ಜನವರಿಯಲ್ಲಿ ಬೋಧಗಯಾದಲ್ಲಿ ಸಂಭವಿಸಿದ ಸ್ಫೋಟದಲ್ಲಿಯೂ ಜಾಹಿದುಲ್ ಮತ್ತು ಸಹಚರರ ಕೈವಾಡ ಇತ್ತು. ಜಾಹಿದುಲ್ ಮತ್ತು ಆತನ ಸಹಚರರು ಜೆಎಂಬಿಯ ಚಟುವಟಿಕೆಗಳನ್ನು ಮುನ್ನಡೆಸಲು ದರೋಡೆ ಮೂಲಕ ಹಣವನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ತನಿಖೆಯಲ್ಲಿ ವಾಗೊದೆ.
2018 ರಲ್ಲಿ, ಅವರು ಈ ಕಾರ್ಯಸೂಚಿಯ ಭಾಗವಾಗಿ ಬೆಂಗಳೂರಿನಲ್ಲಿ ನಾಲ್ಕು ಡಕಾಯಿತಿಗಳನ್ನು ಎಸಗಿದ್ದರು. ಲೂಟಿ ಮಾಡಿದ ಹಣವನ್ನು ಮದ್ದುಗುಂಡುಗಳನ್ನು ಸಂಗ್ರಹಿಸಲು, ಅಡಗುತಾಣಗಳ ವ್ಯವಸ್ಥೆ ಮಾಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳ ತರಬೇತಿ ನೀಡಲು ಬಳಸಿದ್ದರು ಎಂದು ಎನ್ಐಎ ತಿಳಿಸಿತ್ತು.