ವಾಷಿಂಗ್ಟನ್,ನ.13- ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಲ್ಲಿ ಬಿಲೆನಿಯರ್ ಎಲೋನ್ ಮಸ್ಕ್ ಹಾಗೂ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಮಹತ್ವದ ಸ್ಥಾನ ನಿರ್ವಹಿಸಲಿದ್ದಾರೆ.
ಮಸ್ಕ್ ಅವರು ಸರ್ಕಾರಿ ದಕ್ಷತೆಯ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಹಾಗೂ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಮಸ್ಕ್ ವಿಭಾಗದ ಮುಖ್ಯಸ್ಥರಾಗಲಿದ್ದಾರೆ.
ಈ ಇಬ್ಬರು ಅದ್ಭುತ ಅಮೆರಿಕನ್ನರು ಒಟ್ಟಾಗಿ, ಸರ್ಕಾರಿ ಅಧಿಕಾರಶಾಹಿಯನ್ನು ತೆಗೆದುಹಾಕಲು, ಹೆಚ್ಚುವರಿ ನಿಯಮಗಳನ್ನು ಕಡಿತಗೊಳಿಸಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಅಮೆರಿಕ ಉಳಿಸಿ ಆಂದೋಲನಕ್ಕೆ ಅಗತ್ಯವಾದ ಫೆಡರಲ್ ಏಜೆನ್ಸಿಗಳನ್ನು ಪುನರ್ರಚಿಸಲು ನನ್ನ ಆಡಳಿತಕ್ಕೆ ದಾರಿ ಮಾಡಿಕೊಡುತ್ತಾರೆ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷತೆಯ ಮೇಲೆ ಕಣ್ಣಿಟ್ಟು ಎಲೋನ್ ಮತ್ತು ವಿವೇಕ್ ಫೆಡರಲ್ ಅಧಿಕಾರಶಾಹಿಯಲ್ಲಿ ಬದಲಾವಣೆಗಳನ್ನು ಮಾಡುವುದನ್ನು ಮತ್ತು ಅದೇ ಸಮಯದಲ್ಲಿ, ಎಲ್ಲಾ ಅಮೆರಿಕನ್ನರ ಜೀವನವನ್ನು ಉತ್ತಮಗೊಳಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.
ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು 69 ಎಲೆಕ್ಟೋರಲ್ ಮತಗಳಿಂದ ಸೋಲಿಸಿದ್ದರು.ತಮ ವಿಜಯೋತ್ಸವ ಭಾಷಣದಲ್ಲಿ, ಟ್ರಂಪ್ ಅವರು ಮಸ್ಕ್ ಅವರನ್ನು ಶ್ಲಾಘಿಸಿದರು ಮತ್ತು ಅವರನ್ನು ಅದ್ಭುತ ಮತ್ತು ಬುದ್ಧಿವಂತ ಎಂದು ಬಣ್ಣಿಸಿದ್ದರು.