Friday, September 20, 2024
Homeಅಂತಾರಾಷ್ಟ್ರೀಯ | Internationalಭಾರತ- ಅಮೆರಿಕದಿಂದ ವಿಶ್ವಶಾಂತಿ : ರಾಜನಾಥ್‌ ಸಿಂಗ್‌

ಭಾರತ- ಅಮೆರಿಕದಿಂದ ವಿಶ್ವಶಾಂತಿ : ರಾಜನಾಥ್‌ ಸಿಂಗ್‌

'Dedication to US should not be questioned': Rajnath Singh to Indian diaspora

ವಾಷಿಂಗ್ಟನ್‌ ಆ. 23- ಭಾರತೀಯರು ಇತರರನ್ನು ವಂಚಿಸಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ಸ್ವಭಾವದಲ್ಲಿ ಮೋಸ ಎಂಬುದು ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನು ದ್ದೇಶಿಸಿ ಮಾತನಾಡಿದ ಸಚಿವರು, ಅನಿವಾಸಿಗಳಾಗಿ ಅಮೆರಿಕಕ್ಕೆ ಅವರ ಸಮರ್ಪಣೆಯನ್ನು ಪ್ರಶ್ನಿಸಬಾರದು ಎಂದು ಹೇಳಿದರು. ಇಲ್ಲಿ ಕೆಲಸ ಮಾಡುವ ಭಾರತೀಯ ಸದಸ್ಯರಿಗೆ ನಾನು ಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಹೇಳಲು ಬಯಸುತ್ತೇನೆ.

ನಿಮಗೆ ಭಾರತ ಬಗ್ಗೆ ಸಮರ್ಪಣೆ ಇರಬೇಕು. ಆದರೆ ನೀವು ಇಲ್ಲಿ ಕೆಲಸ ಮಾಡುತ್ತಿರುವುದರಿಂದ, ಅಮೆರಿಕದತ್ತ ನಿಮಗಿರುವ ಸಮರ್ಪಣೆಯನ್ನೂ ಪ್ರಶ್ನಿಸಬಾರದು. ಆಗ ಮಾತ್ರ ಭಾರತೀಯರ ಗ್ರಹಿಕೆಗಳು ಚೆನ್ನಾಗಿರುತ್ತದೆ ಎಂದಿದ್ದಾರೆ.

ಭಾರತೀಯರನ್ನು ಮೋಸ ಮಾಡ ಬಹುದು.ಆದರೆ ಭಾರತೀಯರು ಯಾರನ್ನೂ ಮೋಸ ಮಾಡಲಾರರು. ವಂಚನೆ ನಮ ಸ್ವಭಾವ ದಲ್ಲಿಲ್ಲ, ನಾವು ಮೋಸ ಹೋಗಬಹುದು, ಆದರೆ ನಾವು ಎಂದಿಗೂ ಇತರರಿಗೆ ಮೋಸ ಮಾಡಬಾರದು, ಇದು ಜಗತ್ತಿಗೆ ನೀಡಬೇಕಾದ ಸಂದೇಶ ಎಂದು ರಾಜನಾಥ ಸಿಂಗ್‌ ಹೇಳಿದ್ದಾರೆ.

ಭಾರತವು ವಸುಧೈವ ಕುಟುಂಬಕಂೞ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ. ಈ ಜಗತ್ತಿನಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಎಲ್ಲರನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ. ವಸುಧೈವ ಕುಟುಂಬಕಂ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮದು, ನಮ ದೇಶದಲ್ಲಿ ವಾಸಿಸುವವರು ನಮ ಕುಟುಂಬದ ಸದಸ್ಯರಷ್ಟೇ ಅಲ್ಲ, ಜಾತಿ, ಧರ್ಮ, ಸಮುದಾಯಗಳ ಭೇದವಿಲ್ಲದೆ ಜಗತ್ತಿನ ಎಲ್ಲರೂ ಒಂದೇ ಸದಸ್ಯರಾಗಿದ್ದಾರೆ.

ಇಡೀ ಪ್ರಪಂಚವೇ ಒಂದು ಕುಟುಂಬ, ಈ ಸಂದೇಶವನ್ನು ನೀಡಿದ ದೇಶವೊಂದಿದ್ದರೆ ಅದು ನಮದು. ಪ್ರತಿಯೊಬ್ಬರೂ ಇದನ್ನು ಮಾಡಲು ಸಾಧ್ಯವಿಲ್ಲ, ಆಧ್ಯಾತಿಕ ದೇಶ ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಿಂಗ್‌ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ಪ್ರಬಲ ಪಾಲುದಾರರಾಗಲು ಉದ್ದೇಶಿಸಿದ್ದು ಉಭಯ ದೇಶಗಳು ಸಹಜ ಮಿತ್ರ ರಾಷ್ಟ್ರಗಳಾಗಿವೆ. ನಮ ಸಂಬಂಧ ಹಳೇದು .ಭಾರತ-ಯುಎಸ್‌‍ ಸಂಬಂಧಗಳು ಗಟ್ಟಿಯಾಗಬೇಕೆಂದು ವಿಧಿ ಬಯಸುತ್ತದೆ. ಭಾರತ ಮತ್ತು ಅಮೆರಿಕ ಮಾತ್ರ ವಿಶ್ವಕ್ಕೆ ಶಾಂತಿ, ಸಮದ್ಧಿ ಮತ್ತು ಸ್ಥಿರತೆಯನ್ನು ತರಲು ಸಾಧ್ಯ ಎಂದು ಹೇಳಿದ್ದಾರೆ.

ಅಮೆರಿಕವನ್ನು ಅನ್ವೇಷಿಸಲು ಕೊಲಂಬಸ್‌‍ ಹೋದಾಗ, ಅವರು ಸ್ಥಳೀಯ ಅಮೆರಿಕನ್ನರನ್ನು ಭೇಟಿಯಾದರು ಮೊದಲಿನಿಂದಲೂ, ಈ ವಿಧಿ ಭಾರತ-ಯುಎಸ್‌‍ ಸಂಬಂಧಗಳು ಗಟ್ಟಿಯಾಗಬೇಕೆಂದು ಬಯಸಿತು ಎಂದು ನಾನು ನಂಬುತ್ತೇನೆ. ನಮ ಸಂಬಂಧಗಳು ನಿರಂತರವಾಗಿ ಬಲಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

RELATED ARTICLES

Latest News