Thursday, January 23, 2025
Homeರಾಜ್ಯರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರಿಂದ ಜಮೀನು ಲೂಟಿ : ಜೆಡಿಎಸ್ ಆರೋಪ

ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರಿಂದ ಜಮೀನು ಲೂಟಿ : ಜೆಡಿಎಸ್ ಆರೋಪ

Land looted by Ramanagara MLA Iqbal Hussain: JDS alleges

ಬೆಂಗಳೂರು,ಜ.23- ರಾಮನಗರದ ಶಾಸಕ ಇಕ್ಬಾಲ್ ಹುಸೇನ್ರವರು ಯಡಮಾರನಹಳ್ಳಿ ಗ್ರಾಮದಲ್ಲಿ 67 ಎಕರೆ 66 ಗುಂಟೆ ಜಾಗವನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ರೈತರ ಜಮೀನನ್ನು ಲೂಟಿ ಹೊಡೆದಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಶಾಸಕ ಇಕ್ಬಾಲ್ ಹುಸೇನ್ ಒಂದು ಇಡೀ ಗ್ರಾಮವನ್ನೇ ಖರೀದಿ ಮಾಡಿರುವ ಬಗ್ಗೆ ರೈತ ಹೋರಾಟಗಾರರು ಲೋಕಾಯುಕ್ತಗೆ ದೂರು ನೀಡಿದ್ದಾರೆ ಎಂದು ಹೇಳಿದೆ. ಯಡಮಾರನಹಳ್ಳಿ ಗ್ರಾಮದಲ್ಲಿ 50-60 ವರ್ಷಗಳಿಂದ ಅಲ್ಲಿ ವ್ಯವಸಾಯ ಮಾಡಿಕೊಂಡು ಬಂದಿರುವ ರೈತರು ಶಾಸಕನ ಕಿರುಕುಳಕ್ಕೆ ದಯಾ ಮರಣದ ಮೊರೆ ಹೋಗುತ್ತಿದ್ದಾರೆ ಎಂದು ತಿಳಿಸಿದೆ.

ನ್ಯಾಯಾಲಯದಲ್ಲಿ ಅರ್ಜಿ ಇತ್ಯರ್ಥವಾಗದೆ, ಭೂ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವಾಗಲೇ, ಭೂಮಿಯನ್ನು ಸರ್ಕಾರದ ಪ್ರಭಾವ ಬಳಸಿ ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡಿರುವ ಶಾಸಕರು ಮತ ಹಾಕಿ ಗೆಲ್ಲಿಸಿದ ತಪ್ಪಿಗೆ ರೈತರಿಗೆ ಕೊಟ್ಟ ನಿಜವಾದ ಗಿಫ್‌್ಟ ಇದಾಗಿದೆ ಎಂದು ಜೆಡಿಎಸ್ ಟೀಕಿಸಿದೆ.

RELATED ARTICLES

Latest News