Thursday, July 4, 2024
Homeಜಿಲ್ಲಾ ಸುದ್ದಿಗಳುಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 1.04 ಕೋಟಿ ರೂ. ವಂಚನೆ

ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 1.04 ಕೋಟಿ ರೂ. ವಂಚನೆ

ಹುಬ್ಬಳ್ಳಿ,ಜೂ.27- ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಹೆಚ್ಚಿನ ಲಾಭ ಪಡೆಯಬಹು ದೆಂದು ನಗರದ ಉದ್ಯಮಿ ಮತ್ತು ಅವರ ಇಬ್ಬರು ಸ್ನೇಹಿತರಿಗೆ ವೆಬ್ ಲಿಂಕ್ ಕಳುಹಿಸಿ, 1.04 ಕೋಟಿ ವರ್ಗಾಯಿಸಿಕೊಂಡು ವಂಚಿ ಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಶಿವಾನಂದ ಪಾವುಸ್ಕರ್ ಮತ್ತು ಅವರ ಸ್ನೇಹಿತರಾದ ಪ್ರವೀಣ ಕುಲಕರ್ಣಿ, ಸುಜೀತ್ ಕಲಬುರಗಿ ವಂಚನೆಗೆ ಒಳಗಾದವರು. ಫೇಸ್ಬುಕ್ನಲ್ಲಿ ಕ್ರಿಪ್ಟೋ ಕರೆನ್ಸಿ ಕುರಿತು ಜಾಹೀರಾಜು ನೋಡಿ, ಅಲ್ಲಿನ ಮೊಬೈಲ್ ನಂಬರ್ಗೆ ಕರೆ ಮಾಡಿದ್ದರು. ಛಾಯಾಸಿಂಗ್ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ.

ಬಳಿಕ ಅವನು ಕೆಲವು ವೆಬ್ಸೈಟ್ಗಳ ಲಿಂಕ್ ಕಳುಹಿಸಿ, ಅದರಲ್ಲಿರುವ ವಿಯಾಕಾ ಕ್ರಿಪ್ಟೋ ಆ್ಯಪ್ ಅಳವಡಿಸಿಕೊಳ್ಳಲು ಸೂಚಿಸಿದ. ಅದನ್ನು ನಂಬಿದ ಮೂವರು ಮೊಬೈಲ್ಗಳಿಗೆ ಆ್ಯಪ್ ಅಳವಡಿಸಿಕೊಂಡರು.

ಆಗ ಶಿವಾನಂದ ಖಾತೆಯಿಂದ 68.99 ಲಕ್ಷ, ಸುಜಿತ್ ಖಾತೆಯಿಂದ 14.85 ಲಕ್ಷ ಹಾಗೂ ಪ್ರವೀಣ ಖಾತೆಯಿಂದ 21.05 ಲಕ್ಷ ಬೇರೊಂದು ಖಾತೆಗೆ ವರ್ಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES

Latest News