Sunday, July 27, 2025
Homeರಾಜ್ಯಕೇಂದ್ರದಿಂದ 1.52 ಮೆಟ್ರಿಕ್‌ ಟನ್‌ ಯೂರಿಯಾ ಗೊಬ್ಬರ ಬರಬೇಕಿದೆ : ಸಚಿವ ಚಲುವರಾಯ ಸ್ವಾಮಿ

ಕೇಂದ್ರದಿಂದ 1.52 ಮೆಟ್ರಿಕ್‌ ಟನ್‌ ಯೂರಿಯಾ ಗೊಬ್ಬರ ಬರಬೇಕಿದೆ : ಸಚಿವ ಚಲುವರಾಯ ಸ್ವಾಮಿ

1.52 metric tons of urea fertilizer is yet to be supplied from the Centre

ಬೆಂಗಳೂರು,ಜು.27– ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1,52,760 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಸರಬರಾಜು ಆಗುವುದು ಬಾಕಿ ಇದೆ ಎಂದು ಕೃಷಿ ಸಚಿವ ಎಂ.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 11,17,000 ಮೆಟ್ರಿಕ್‌ ಟನ್‌ ರಸಗೊಬ್ಬರ ಹಂಚಿಕೆಯಾಗಿದೆ ಎಂದಿದ್ದಾರೆ. ಏಪ್ರಿಲ್‌ನಿಂದ ನಿನ್ನೆಯವರೆಗೆ ಯೂರಿಯ ರಸಗೊಬ್ಬರದ ಬೇಡಿಕೆ, 6,80,655 ಮೆಟ್ರಿಕ್‌ ಟನ್‌ನಷ್ಟಿದೆ. ಕೇಂದ್ರ ಸರ್ಕಾರ 5,27,895 ಮೆಟ್ರಿಕ್‌ ಟನ್‌ ಯೂರಿಯಾವನ್ನು ಸರಬರಾಜು ಮಾಡಿದೆ. ಹಳೆಯ ದಾಸ್ತಾನು 3,46,499 ಮೆಟ್ರಿಕ್‌ ಟನ್‌ ಇತ್ತು ಅವರು ಹೇಳಿದ್ದಾರೆ.

ಒಟ್ಟು 8,74,394 ಮೆಟ್ರಿಕ್‌ ಟನ್‌ ಯೂರಿಯ ದಾಸ್ತಾನಿನಲ್ಲಿ 7,30,659 ಮೆಟ್ರಿಕ್‌ ಟನ್‌ ವಿತರಣೆ ಮತ್ತು ಮಾರಾಟ ಮಾಡಲಾಗಿದೆ. ಇನ್ನು 1,53,735 ಮೆಟ್ರಿಕ್‌ ಟನ್‌ ದಾಸ್ತಾನಿದೆ ಎಂದು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯೂರಿಯ ರಸಗೊಬ್ಬರದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

RELATED ARTICLES

Latest News