Saturday, February 22, 2025
Homeಜಿಲ್ಲಾ ಸುದ್ದಿಗಳು | District Newsಚಾಮರಾಜನಗರ | Chamarajanagarಮಲೈ ಮಹದೇಶ್ವರ ಸ್ವಾಮಿ ಹುಂಡಿಯಲ್ಲಿ 1.94 ಕೋಟಿ ರೂ. ಕಾಣಿಕೆ ಸಂಗ್ರಹ

ಮಲೈ ಮಹದೇಶ್ವರ ಸ್ವಾಮಿ ಹುಂಡಿಯಲ್ಲಿ 1.94 ಕೋಟಿ ರೂ. ಕಾಣಿಕೆ ಸಂಗ್ರಹ

1.94 crores Donations collected in Malai Mahadeshwara Swamy Hundi.

ಹನೂರು,ಫೆ.21- ತಾಲ್ಲೂಕಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿ ಎಣಿಕೆ ನಡೆದಿದ್ದು 28 ದಿನಗಳಲ್ಲಿ 1.94 ಕೋಟಿ ರೂ. ಸಂಗ್ರಹವಾಗಿದೆ. ಇದರೊಂದಿಗೆ ಮಾದಪ್ಪಸ್ವಾಮಿ ಮತ್ತೆ ಕೋಟ್ಯಾಧಿಪತಿಯಾದಂತಾಗಿದೆ.

ಮಾದಪ್ಪನಿಗೆ ಭಕ್ತರು ಹರಕೆ ರೂಪದಲ್ಲಿ ಹಣ, ಚಿನ್ನ, ಬೆಳ್ಳಿ ಅರ್ಪಿಸಿದ್ದು, ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,

28 ದಿನಗಳಲ್ಲಿ 1.94 ಕೋಟಿ ರೂ. ನಗದು, 63 ಗ್ರಾಂ 6 ಮಿಲಿ ಚಿನ್ನ, 1 ಕೆಜಿ 510 ಗ್ರಾಂ ಬೆಳ್ಳಿ, 11 ವಿದೇಶಿ ನೋಟುಗಳು ಸಂಗ್ರಹವಾಗಿವೆ. ಜ.23 ರಿಂದ ಫೆ.19ರವರೆಗೆ ಹುಂಡಿ ಎಣಿಕೆಯಲ್ಲಿ ಇಷ್ಟು ದೊಡ್ಡ ಮೊತ್ತದ ಕಾಣಿಕೆ ಸಂದಿದೆ.

RELATED ARTICLES

Latest News