ಕಲಬುರಗಿ,ಜೂ.29- ಇಲ್ಲಿನ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ..
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವ ಗಾದೆ ಮಾತು ಅಕ್ಷರಶಃ ನಿಜವಾಗಿದೆ. ಪಿರಿಯಡ್‌್ಸಸಮಯದಲ್ಲಿ ಮಹಿಳೆಯರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಆರೋಗ್ಯ ಇಲಾಖೆ ಮೂಲಕ ಉಚಿತ ಸ್ಯಾನಿಟರಿ ಪ್ಯಾಡ್ ನೀಡುತ್ತದೆ. ಆದರೆ ಕಲಬುರಗಿಯ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1 ಲಕ್ಷಕ್ಕೂ ಅಧಿಕ ಶುಚಿ ಪ್ಯಾಡ್‌ಗಳನ್ನು ಸುಟ್ಟು ಹಾಕಲಾಗಿದೆ.
ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ 15 ಹಳ್ಳಿಯ ಮಹಿಳೆಯರಿಗೆ ಇದನ್ನು ಹಂಚಬೇಕಾಗಿತ್ತು. ಕಳೆದ 2017ರಲ್ಲಿ ತಯಾರಾಗಿದ್ದ ಪ್ಯಾಡ್‌ಗಳು 2021ರವರೆಗೆ ವ್ಯಾಲಿಡಿಟಿ ಇತ್ತು ಆದರೆವಿತರಿಸದೇ ಹಾಗೇ ಬಿಟ್ಟಿದ್ದಾರೆ.
ಆರೋಗ್ಯ ಕೇಂದ್ರ ಉನ್ನತೀಕರಣಗೊಂಡ ಹಿನ್ನೆಲೆ ಹಳೆಯ ಕಟ್ಟಡವನ್ನು ತೆರವು ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಹಳೆಯ ಕಟ್ಟಡ ತೆರವಿನ ವೇಳೆ ಕಟ್ಟಡದ ತುಂಬೆಲ್ಲಾ ವಿತರಣೆಯಾಗದ 100ಕ್ಕೂ ಹೆಚ್ಚು ಬಾಕ್ಸಗಳಲ್ಲಿ ಇದು ಪತ್ತೆಯಾಗಿವೆ. ಇದನ್ನು ಕಂಡ ಪಿಎಚ್‌ಸಿಯ ಕೆಲ ಸಿಬ್ಬಂದಿಗಳು ಕೂಡಲೇ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ಬೆಂಕಿ ನೋಡಿ ಸ್ಥಳಕ್ಕೆ ಹೋಗಿ ನೋಡುತ್ತಿದಾಗ ಸಿಬ್ಬಂದಿ ಕಾಲ್ಕಿತ್ತಿದ್ದಾರೆ.
ಘಟನೆ ಬಹಿರಂಗ ವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ವೈದ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಜೊತೆಗೆ ಫರಹತಾಬಾದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಎಡವಟ್ಟು ಸಹ ಇದೀಗ ಕಂಡು ಬರುತ್ತಿದೆ.