ಥಾಣೆ,ಅ.13- ವಿದ್ಯುತ್ ತಂತಿಗೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಹೋದ ಫೈರ್ ಗ್ರೇಡ್ನ ಅಧಿಕಾರಿ ತಮ ಪ್ರಾಣ ಕಳೆದುಕೊಂಡಿದ್ದು, ಸಹಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಖಾರಿಗಾನ್ನ ಸುಧಾಮ ರೆಸಿಡೆನ್ಸಿಯ ಡಿವಾ-ಶಿಲ್ ರಸ್ತೆಯಲ್ಲಿ ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ದತಿವಾಲಿ ನಿವಾಸಿ ಉತ್ಸವ ಪಾಟೀಲ್(28) ಮೃತಪಟ್ಟಿರುವ ಅಧಿಕಾರಿ. ಪಾಲ್ಘರ್ನ ವಾಡಾ ನಿವಾಸಿ ಆಜಾದ್ ಪಾಟೀಲ್ (29) ಗಂಭೀರ ಗಾಯಗೊಂಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಅಗ್ನಿಶಾಮಕ ದಳದೊಂದಿಗೆ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು.
ಘಟನೆ ವಿವರ : ಟೊರೆಂಟ್ ಪವರ್ ಕಂಪನಿಗೆ ಸೇರಿದ ಓವರ್ಹೆಡ್ ವೈರ್ಗಳಲ್ಲಿ ಪಾರಿವಾಳ ಸಿಲುಕಿರುವ ಬಗ್ಗೆ ಥಾಣೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ದಿವಾ ಬೀಟ್ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ದಳದವರು ರಕ್ಷಣಾ ವಾಹನದೊಂದಿಗೆ ಸ್ಥಳಕ್ಕೆ ಬಂದಿದ್ದರು.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಅಗ್ನಿಶಾಮಕ ದಳದವರು ಆಕಸಿಕವಾಗಿ ಹೈಟೆನ್ಷನ್ ವಿದ್ಯುತ್ ಕೇಬಲ್ ಸಂಪರ್ಕಕ್ಕೆ ಬಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದರು. ಅವರನ್ನು ತಕ್ಷಣ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಸ್ತುತ ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅಗ್ನಿಶಾಮಕ ಅಧಿಕಾರಿ ಗಿರೀಶ್ ಝಲಕೆ ತಿಳಿಸಿದ್ದಾರೆ.