Thursday, December 19, 2024
Homeರಾಷ್ಟ್ರೀಯ | Nationalಇಂದು ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

ಇಂದು ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

10 killed in separate accidents today

ಪಿಲಿಭಿತ್‌/ಚಿತ್ರಕೂಟ,ಡಿ.6-ಇಂದು ಮುಂಜಾನೆ ಉತ್ತರ ಪ್ರದೇಶದ ಪಿಲಿಭಿತ್‌ ಮತ್ತು ಚಿತ್ರಕೂಟ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 12ಜನರು ಗಾಯಗೊಂಡಿದ್ದಾರೆ.

ಪಿಲಿಭಿತ್‌ನ ಜಿಲ್ಲೆಯ ನಿಯೋರಿಯಾ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ 11 ಜನರಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಾಖಂಡದ ಖತಿಮಾದಿಂದ ಕೆಲವು ಜನರು ಮದುವೆಯಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದರು. 11 ಜನರೊಂದಿಗೆ ಮಾರುತಿ ಎರ್ಟಿಗಾ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಚಾಲಕನಿಯಂತ್ರಣ ಕಳೆದುಕೊಂಡು ರಸ್ತೆಯ ಉದ್ದಕ್ಕೂ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಅವಿನಾಶ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಒಟ್ಟು ಐವರು ಸಾವನ್ನಪ್ಪಿದ್ದಾರೆ,ಗಾಯಗೊಂಡವರಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮತ್ತಿಬ್ಬರು ಅಪಾಯದಿಂದ ಪಾರಾಗಿದ್ದು ,ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಪಾಂಡೆ ಹೇಳಿದರು.

ಚಿತ್ರಕೂಟ ಜಿಲ್ಲೆಯಲ್ಲಿ ಮಹೀಂದ್ರಾ ಬೊಲೆರೊ ವಾಹನ ಮತ್ತುಟ್ರಕ್‌ ಮುಖಾಮುಖಿ ಡಿಕ್ಕಿ ಹೊಡೆದು ಐದು ಜನರು ಸಾವನ್ನಪ್ಪಿದ್ದಾರೆ,ರಾಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ 5.30 ರ ಸುಮಾರಿಗೆ ಈ ಘಟನೆಯು ಸಂಭವಿಸಿದೆ.

ಬೊಲೆರೋ ರಾಯಪುರದಿಂದ ಹೋಗುತ್ತಿತ್ತು ಮತ್ತು ಟ್ರಕ್‌ ಪ್ರಯಾಗರಾಜ್‌ನಿಂದ ರಾಯಪುರ ಬರುತ್ತಿತ್ತು ಎಂದು ಪೊಲೀಸ್‌‍ ಅಧಿಕಾರಿ ಸಿಂಗ್‌ ಹೇಳಿದರು. ಬೊಲೆರೋದಲ್ಲಿ 11 ಜನರಿದ್ದರು, ಈವರೆಗೆ ಐದು ಜನರು ಸಾವನ್ನಪ್ಪಿದ್ದಾರೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು.

RELATED ARTICLES

Latest News