Friday, October 25, 2024
Homeರಾಷ್ಟ್ರೀಯ | Nationalಮೂರು ಅಂತಸ್ತಿನ ಮನೆ ಕುಸಿದು 10 ಮಂದಿ ಸಾವು

ಮೂರು ಅಂತಸ್ತಿನ ಮನೆ ಕುಸಿದು 10 ಮಂದಿ ಸಾವು

10 people killed in building collapse in Uttar Pradesh's Meerut, rescue ops end

ಮೀರತ್‌, ಸೆ 15 (ಪಿಟಿಐ) ಇಲ್ಲಿನ ಝಾಕಿರ್‌ ನಗರದಲ್ಲಿ ಮೂರು ಅಂತಸ್ತಿನ ಮನೆಯೊಂದು ಕುಸಿದು ಬಿದ್ದ ಪರಿಣಾಮ ಹತ್ತು ಮಂದಿ ಮೃತಪಟ್ಟಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ ಮೀರತ್‌ ಜಿಲ್ಲಾಡಳಿತ ತಿಳಿಸಿದೆ.ಘಟನಾ ಸ್ಥಳದಲ್ಲಿಒಬ್ಬ ವ್ಯಕ್ತಿ ಇನ್ನೂ ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಆಡಳಿತವು ಹೇಳಿಕೆಯಲ್ಲಿ ತಿಳಿಸಿದೆ.

ಮತರನ್ನು ಸಾಜಿದ್‌ (40), ಅವರ ಮಗಳು ಸಾನಿಯಾ (15), ಮಗ ಸಾಕಿಬ್‌ (11), ಸಿವ್ರಾ (ಒಂದೂವರೆ ವರ್ಷ), ರೀಜಾ (7), ನಫೊ (63), ಫರ್ಹಾನಾ (20), ಅಲಿಸಾ ಎಂದು ಗುರುತಿಸಲಾಗಿದೆ. ಅಲಿಯಾ (6) ಮತ್ತು ರಿವ್ಸಾ (5 ತಿಂಗಳು).
ಸೋಫಿಯಾನ್‌ (6) ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡವರಲ್ಲಿ ನಯೀಮ್‌ (22), ನದೀಮ್‌ (26), ಸಾಕಿಬ್‌ (20) ಮತ್ತು ಸೈನಾ (38) ಲಾಲಾ ಲಜಪತ್‌ ರಾಯ್‌ ಸಾರಕ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೀರತ್‌ ವಲಯದ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕ ಡಿ ಕೆ ಠಾಕೂರ್‌, ವಿಭಾಗೀಯ ಕಮಿಷನರ್‌ ಸೆಲ್ವ ಕುಮಾರಿ ಜೆ, ಪೊಲೀಸ್‌‍ ಮಹಾನಿರೀಕ್ಷಕ ನಚಿಕೇತ ಝಾ ಮತ್ತು ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ವಿಪಿನ್‌ ತಾಡಾ ಸೇರಿದಂತೆ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಮತ್ತು ಪೊಲೀಸ್‌‍ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

RELATED ARTICLES

Latest News