Friday, November 22, 2024
Homeಇದೀಗ ಬಂದ ಸುದ್ದಿನಾಳೆ ರಾತ್ರಿಯಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತ

ನಾಳೆ ರಾತ್ರಿಯಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತ

ಬೆಂಗಳೂರು,ಮೇ.5– ನಾಳೆ ರಾತ್ರಿಯಿಂದ ಆಂಬುಲೆನ್ಸ್ ಸೇವೆಗಳು ಸ್ಥಗಿತಗೊಳ್ಳಲಿವೆ. ಮೂರು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ನಾಳೆ ರಾತ್ರಿ ಎಂಟು ಗಂಟೆಯಿಂದ ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಗಳನ್ನು ಸ್ಥಗಿತಗೊಳಿಸಲು ಸಿಬ್ಬಂದಿಗಳು ಸಿದ್ದರಾಗಿದ್ದಾರೆ.

108 ಆಂಬುಲೆನ್ಸ್ ಸೇವೆಯ ಉಸ್ತುವಾರಿ ವಹಿಸಿಕೊಂಡಿರುವ ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಬ್ಬಂದಿಗಳು ಅಕ್ರೋಶ ವ್ಯಕ್ತಪಡಿಸಿ ನಾಳೆಯಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ ಎಂದು 108 ಅಂಬುಲೆನ್ಸ್ ನೌಕರ ಸಂಘದ ಉಪಾಧ್ಯಕ್ಷ ದಯಾನಂದ್‌ ತಿಳಿಸಿದ್ದಾರೆ.

ಒಂದು ಕಡೆ ಮೂರು ತಿಂಗಳಿಂದ ಸಂಬಳವಿಲ್ಲ..ಮತ್ತೊಂದು ಕಡೆ ವೇತನ ಕಡಿತಗೊಳಿಸಿರೋ ಜಿವಿಕೆ ಸಂಸ್ಥೆಯ ನಿರ್ಧಾರ ವಿರೋಧೀಸಿ ನಾವು ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಡಿಸೆಂಬರ್‌, ಜನವರಿ ತಿಂಗಳ ವೇತನವನ್ನು 30 ಸಾವಿರದಿಂದ ಕಡಿತ ಮಾಡಿ ಕೇವಲ 13 ಸಾವಿರ ವೇತನ ನೀಡಲಾಗಿದೆ. ನಾಳೆ ಸಂಜೆಯೊಳಗೆ ಕಡಿತ ಮಾಡಿದ ವೇತನವನ್ನು ಬಿಡುಗಡೆ ಮಾಡಬೇಕು ಇಲ್ಲಿದಿದ್ದರೆ ನಮ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

Latest News