ಗೊಂಡಾ,ಆ.3-ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬೆಲ್ವಾ ಬಹುತಾ ಬಳಿ ಸರಯು ನೀರಿನ ಕಾಲುವೆಗೆ ವಾಹನ ಉರುಳಿ ಬಿದ್ದು 11 ಜನರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಸಿಹಗಾಂವ್ ಗ್ರಾಮದಿಂದ ಖಾರ್ಗುಪುರದ ಪೃಥ್ವಿನಾಥ ದೇವಸ್ಥಾನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಇಟಿಯಾಥೋಕ್ ಪೊಲೀಸ್ ಠಾಣೆಯ ಅಧಿಕಾರಿ ಕೃಷ್ಣ ಗೋಪಾಲ್ ರೈ ಹೇಳಿದ್ದಾರೆ.ವಾಹನದಲ್ಲಿ ಚಾಲಕ ಸೇರಿದಂತೆ 15 ಜನರು ಇದ್ದರು ಎಂದು ತಿಳಿದುಬಂದಿದ್ದು,ಅಪಘಾತದ ವೇಳೆ ಗ್ರಾಮಸ್ಥರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ, ಮುಳುಗಿದ ವಾಹನದಿಂದ 11 ಶವಗಳನ್ನು ಹೊರತೆಗೆಯಲಾಯಿತು ಎಂದು ತಿಳಿಸಿದರು.
ಗಂಭೀರ ಸ್ಥಿತಿಯಲ್ಲಿದ್ದ ಇತರ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಘಟನೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ.
- ಡಾ.ವಿಷ್ಣುವರ್ಧನ್, ಶೃತಿ, ಉಪೇಂದ್ರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ
- ಹೊಸ ಹಂತ ತಲುಪಲಿದೆ ಭಾರತ-ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆ
- ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದ್ದು ಮೋದಿ ಹೇಳಿದಂತೆ ಕೇಳುತ್ತಿದೆ : ಸಚಿವ ರಾಮಲಿಂಗಾರೆಡ್ಡಿ
- ಕ್ರಿ.ಪೂ.26450 ವರ್ಷಗಳ ಹಳೆಯ ಹಿಂದೂ ಕಲ್ಪವಿಗ್ರಹ
- ಪಾಕ್-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ಕುರಿತು ಭಾರತ ಅಲರ್ಟ್