Thursday, May 22, 2025
Homeರಾಷ್ಟ್ರೀಯ | National11 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

11 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

11 Tamil Nadu fishermen return home after release from Sri Lankan custody

ಚೆನ್ನೈ, ಮೇ 22 (ಪಿಟಿಐ) ಹನ್ನೊಂದು ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ. ಶ್ರೀಲಂಕಾದ ಜೈಲಿನಿಂದ ಬಿಡುಗಡೆಯಾದ ಹನ್ನೊಂದು ಭಾರತೀಯ ಮೀನುಗಾರರು ಇಂದು ತಾಯ್ಕಾಡಿಗೆ ಹಿಂತಿರುಗಿದರು.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮೀನುಗಾರರನ್ನು ಸಮುದ್ರ ಉಲ್ಲಂಘನೆ ಆರೋಪದ ಮೇಲೆ ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಅವರನ್ನು ಬಿಡುಗಡೆ ಮಾಡಿತ್ತು.ಅವರು ಇಂದು ಮುಂಜಾನೆ ಕೊಲಂಬೊದಿಂದ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿ ರಸ್ತೆ ಮೂಲಕ ತಮ್ಮ ಊರಿಗೆ ತೆರಳಿದರು.

RELATED ARTICLES

Latest News