ಪಣಜಿ, ಮಾ.27- ದಕ್ಷಿಣ ಗೋವಾದ ಖಾಸಗಿ ಸಣ್ಣ ಕ್ಯಾಲಿಬರ್ ಮದ್ದುಗುಂಡು ತಯಾರಿಕಾ ಕಾರ್ಖಾನೆಯ ಗೋದಾಮಿನಲ್ಲಿ ನಡೆದ ಸ್ಫೋಟದ ತನಿಖೆಯ ವೇಳೆ ಸುಮಾರು 11,000 ಕೆಜಿ ಗನ್ ಪೌಡರ್ ಅನ್ನು ಅಕ್ರಮವಾಗಿ ಘಟಕದಲ್ಲಿ ಸಂಗ್ರಹಿಸಿರುವುದು ತಿಳಿದುಬಂದಿದೆ.
ಡ್ಯೂಸ್ ಪ್ರಿಸಿಶನ್ ಮ್ಯಾನುಫ್ಯಾಕ್ಟರಿಂಗ್ ಕಾರ್ಖಾನೆಯಲ್ಲಿ ಅಧಿಕಾರಿಗಳಿಂದ ಅಗತ್ಯವಾದ ಪರವಾನಗಿಯನ್ನು ಪಡೆಯದೆ ಸುಮಾರು 11,000 ಕೆಜಿ ಗನ್‌ಪೌರ್ಡ ಅನ್ನು ಮ್ಯಾಗಜೀನ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 20 ರಂದು ರಾತ್ರಿ 10.30 ರ ಸುಮಾರಿಗೆ ಗೋದಾಮಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸುಮಾರು 14.5 ಟನ್ ಗನ್ ಪೌಡರ್ ನಾಶಗೊಂಡು ಬೃಹತ್ ಸ್ಫೋಟ ಸಂಭವಿಸಿದೆ.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರು ಅಕ್ಕಪಕ್ಕದಲ್ಲಿ ವಾಸಿಸುವ ಜನರ ಮನೆಗಳಲ್ಲಿ ಬಿರುಕುಗಳನ್ನು ಸೃಷ್ಟಿಸಿದೆ..
ಕ್ವಿಪೆಮ್ ಪಟ್ಟಣದಲ್ಲಿ ದಕ್ಷಿಣ ಗೋವಾದ ಜಿಲ್ಲಾ ಆಧಿಕಾರೊಗಳು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸದಿರುವುದು ಬೆಂಕಿ ಅವಘಡಕ್ಕೆ ಕಾರಣವಾಯಿತು ಎಂದು ತಿಳಿಸಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಯಿಂದ ಅನುಮತಿ ಪಡೆಯದೆ ಕಂಪನಿಯು 11,000 ಕಿಲೋಗ್ರಾಂಗಳಷ್ಟು ಗನ್‌ಪೌರ್ಡ ಅನ್ನು ಸಂಗ್ರಹಿಸಿದೆ ಎಂದು ಇದುವರೆಗೆ ನಡೆಸಲಾದ ಪೊಲೀಸ್ ವಿಚಾರಣೆಯು ಸೂಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.