Home ಇದೀಗ ಬಂದ ಸುದ್ದಿ ಬಿಹಾರದಲ್ಲಿ 17 ದಿನದಲ್ಲಿ 12 ಸೇತುವೆ ಕುಸಿತ : ಸುಪ್ರೀಂ ನೋಟಿಸ್‌

ಬಿಹಾರದಲ್ಲಿ 17 ದಿನದಲ್ಲಿ 12 ಸೇತುವೆ ಕುಸಿತ : ಸುಪ್ರೀಂ ನೋಟಿಸ್‌

0
ಬಿಹಾರದಲ್ಲಿ 17 ದಿನದಲ್ಲಿ 12 ಸೇತುವೆ ಕುಸಿತ : ಸುಪ್ರೀಂ ನೋಟಿಸ್‌

ನವದೆಹಲಿ,ಜು.30-ಕಳೆದ ತಿಂಗಳು ಬಿಹಾರದಲ್ಲಿ ಕೇವಲ 17 ದಿನದಲ್ಲಿ 12 ಸೇತುವೆ ಕುಸಿತದ ಘಟನೆ ನಡೆದ ಬೆನ್ನಲ್ಲೇ ಬಿಹಾರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ಸೇತುವೆಗಳ ಸುರಕ್ಷತೆ ಮತ್ತು ಬಾಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ. ವೈ.ಚಂದ್ರಚೂಡ್‌ ಅವರ ಪೀಠ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಹಾರ ರಾಜ್ಯ ಪುಲ್‌ ನಿರ್ಮಾಣ ನಿಗಮದ ಅಧ್ಯಕ್ಷ ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ನೋಟಿಸ್‌ ಜಾರಿ ಮಾಡಿದೆ.