Tuesday, July 2, 2024
Homeರಾಷ್ಟ್ರೀಯಪಾಕ್‌ನಿಂದ ಡ್ರೋನ್‌ ಮೂಲಕ ಸಾಗಿಸುತ್ತಿದ್ದ 12 ಕೆ.ಜಿ ಹೆರಾಯಿನ್‌ ರಾಜಸ್ಥಾನದಲ್ಲಿ ವಶ

ಪಾಕ್‌ನಿಂದ ಡ್ರೋನ್‌ ಮೂಲಕ ಸಾಗಿಸುತ್ತಿದ್ದ 12 ಕೆ.ಜಿ ಹೆರಾಯಿನ್‌ ರಾಜಸ್ಥಾನದಲ್ಲಿ ವಶ

ಜೈಪುರ, ಜೂನ್‌ 15 – ಪಾಕಿಸ್ತಾನದಿಂದ ಡ್ರೋನ್‌ಗಳನ್ನು ಬಳಸಿ ರಾಜಸ್ಥಾನದ ಅನುಪ್‌ಗಢ್‌‍ ಜಿಲ್ಲೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 12 ಕೆಜಿ ಹೆರಾಯಿನ್‌ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 60 ಕೋಟಿ ರೂಪಾಯಿ ಮೌಲದ ಹೆರಾಯಿನ್‌ನನ್ನು ಡ್ರೋನ್‌ಗಳನ್ನು ಬಳಸಿ ಪಾಕಿಸ್ತಾನದಿಂದ ಅಕ್ರಮವಾಗಿ ಸಾಗಿಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌‍ಎಫ್‌‍) ಮತ್ತು ಪೊಲೀಸರು ಜಿಲ್ಲೆಯ ಅನುಪ್‌ಗಢ ಮತ್ತು ಸಮೇಜ ಕೋಠಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ತಲಾ 6 ಕೆಜಿ ತೂಕದ ಎರಡು ಹೆರಾಯಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಪಗಢ ಪೊಲೀಸ್‌‍ ಠಾಣೆ ವ್‌ಯಾಪ್ತಿಯಲ್ಲಿ ಇಂದು ಬೆಳಗ್ಗೆ ಕೈಲಾಶ್‌ ಪೋಸ್ಟ್‌ ಬಳಿಯ 13 ಕೆ ಗ್ರಾಮದಲ್ಲಿ ಡ್ರೋನ್‌ ಶಬ್ದ ಕೇಳಿದ ಬಿಎಸ್‌‍ಎಫ್‌ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಬಿಎಸ್‌‍ಎ್‌‍ ಯೋಧರು ಮತ್ತು ಪೊಲೀಸ್‌‍ ಸಿಬ್ಬಂದಿ ಜಂಟಿಯಾಗಿ ನಡೆಸಿದ ಶೋಧದಲ್ಲಿ 6 ಕೆಜಿ ತೂಕದ ಎರಡು ಹೆರಾಯಿನ್‌ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಸರಕಿನ ಮೌಲ್ಯ 30 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸಮೇಜ ಕೋಠಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡನೇ ಘಟನೆಯಲ್ಲಿ ಡ್ರೋನ್‌ ಸದ್ದು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಕಳ್ಳಸಾಗಣೆದಾರರು ಬಂದಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರು ಮತ್ತು ಪೊಲೀಸರ ತಂಡವನ್ನು ಕಂಡ ಕಳ್ಳಸಾಗಾಣಿಕೆದಾರರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧದ ವೇಳೆ 30 ಕೋಟಿ ಮೌಲ್ಯದ 6 ಕೆಜಿ ಹೆರಾಯಿನ್‌ ಹೊಂದಿರುವ ಎರಡು ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಮಾದಕವಸ್ತುಗಳನ್ನು ಆಗಾಗ್ಗೆ ಕಳ್ಳಸಾಗಣೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಡ್ರೋನ್‌ಗಳನ್ನು ಪತ್ತೆಹಚ್ಚಲು ಮತ್ತು ನಿಷ್ಕ್ರಿಯಗೊಳಿಸಲು ಗಡಿ ಪ್ರದೇಶದಲ್ಲಿ ಡ್ರೋನ್‌ ವಿರೋಧಿ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಅನುಪ್‌ಗಢ ಪೊಲೀಸ್‌‍ ವರಿಷ್ಠಾಧಿಕಾರಿ ರಮೇಶ್‌ ಮೋರಿಯಾ ಹೇಳಿದ್ದಾರೆ.

RELATED ARTICLES

Latest News