Wednesday, March 12, 2025
Homeರಾಷ್ಟ್ರೀಯ | Nationalವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿವೆ ಭಾರತದ 13 ನಗರಗಳು..!

ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿವೆ ಭಾರತದ 13 ನಗರಗಳು..!

13 Of World's 20 Most Polluted Cities In India, Delhi Most Polluted Capital

ನವದೆಹಲಿ, ಮಾ.11-ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳಲ್ಲಿ ಹದಿಮೂರು ಭಾರತದಲ್ಲಿದೆ….! ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಸಂಸ್ಥೆ ಇಂದು ಬಿಡುಗಡೆ ಮಾಡಿರುವ ವಿಶ್ವ ವಾಯು ಗುಣಮಟ್ಟ ವರದಿ -2024ನಲ್ಲಿ ದೆಹಲಿಯು ಜಾಗತಿಕವಾಗಿ ಅತ್ಯಂತ ಕಲುಷಿತ ರಾಜಧಾನಿಯಾಗಿ ಉಳಿದಿದೆ. ಇನ್ನು ಭಾರತವು 2024 ರಲ್ಲಿ ವಿಶ್ವದ ಐದನೇ ಅತ್ಯಂತ ಕಲುಷಿತ ದೇಶವಾಗಿ ಸ್ಥಾನ ಪಡೆದಿದೆ ಹಿಂದೆ 2023 ರಲ್ಲಿ ಮೂರನೇ ಸ್ಥಾನದಲ್ಲಿತ್ತು.

2023 ರಲ್ಲಿ ಪ್ರತಿ ಘನ ಮೀಟರ್‌ಗೆ 54.4 ಮೈಕ್ರೋಗ್ರಾಮ್ ಗಳಿಗೆ ಹೋಲಿಸಿದರೆ, 2024 ರಲ್ಲಿ ಪಿಎಂ 2.5 ಸಾಂದ್ರತೆಯಲ್ಲಿ ಭಾರತವು ಶೇಕಡಾ 7 ರಷ್ಟು ಕುಸಿತವನ್ನು ಕಂಡಿದೆ, ಪ್ರತಿ ಘನ ಮೀಟ‌ರ್ಗೆಗೆ ಸರಾಸರಿ 50.6 ಮೈಕ್ರೋಗ್ರಾಂಗಳಷ್ಟು. ಆದರೂ, ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ ಎಂಬುದು ಕಳವಳಕಾರಿ ಅಂಶ. ದೆಹಲಿಯು ಸ್ಥಿರವಾಗಿ ಹೆಚ್ಚಿನ ಮಾಲಿನ್ಯದ ಮಟ್ಟವನ್ನು ದಾಖಲಿಸಿದೆ.

ವಿಶ್ವದ ಟಾಪ್ 20 ಕಲುಷಿತ ನಗರಗಳಲ್ಲಿ 13 ಭಾರತೀಯ ನಗರಗಳೆಂದರೆ ಅಸ್ಸಾಂನ ಬೈರ್ನಿಹಾಟ್, ದೆಹಲಿ, ಮುಲ್ಲನ್‌ಪುರ್ (ಪಂಜಾಬ್), ಫರಿದಾಬಾದ್, ಲೋನಿ, ನವದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಯಾ, ಭಿವಾಡಿ, ಮುಜಾರ್ಫನಗರ ಹನುಮಾನ್‌ ಗಢ ಮತ್ತು ನೋಯ್ತಾ.

ಒಟ್ಟಾರೆಯಾಗಿ, 35 ಪ್ರತಿಶತ ಭಾರತೀಯ ನಗರಗಳು ವಾರ್ಷಿಕ 2.5 ಮಟ್ಟಗಳು ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳ ಮಿತಿಯನ್ನು 10 ಪಟ್ಟು ಮೀರಿದೆ ಎಂದು ವರದಿ ಮಾಡಿದೆ. ಭಾರತದಲ್ಲಿ ವಾಯು ಮಾಲಿನ್ಯವು ಗಂಭೀರವಾದ ಆರೋಗ್ಯದ ಅಪಾಯ ಹೆಚ್ಚಿಸಿದೆ. ಅಂದಾಜು 5.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ, 2009 ರಿಂದ 2019 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಸಾವುಗಳಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿವೆ.

2.5 ಮೈಕ್ರಾನ್‌ಗಳಿಗಿಂತ ಚಿಕ್ಕದಾದ ಸಣ್ಣವಾಯು ಮಾಲಿನ್ಯದ ಕಣಗಳನ್ನು ಅಪಾಯಕಾರಿಯಾಗಿದ್ದು, ಇದು ಶ್ವಾಸಕೋಶಗಳು ಮತ್ತು ರಕ್ತನಾಳವನ್ನು ಪ್ರವೇಶಿಸಬಹುದು, ಇದು ಉಸಿರಾಟದ ತೊಂದರೆಗಳು, ಹೃದ್ರೋಗ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಮೂಲಗಳು ವಾಹನದ ಹೊಗೆ, ಕೈಗಾರಿಕಾ ಹೊರಸೂಸುವಿಕೆ ಅನಿಲ ಮತ್ತು ಮರದ ಅಥವಾ ಬೆಳೆ ತ್ಯಾಜ್ಯವನ್ನು ಸುಡುವುದರಿಂದ ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಜ್ಞಾನಿ ಮತ್ತು ಆರೋಗ್ಯ ಸಚಿವಾಲಯದ ಸಲಹೆಗಾರ್ತಿ ಸೌಮ್ಯಾ ಸ್ವಾಮಿನಾಥನ್, ಭಾರತವು ಗಾಳಿಯ ಗುಣಮಟ್ಟದ ಡೇಟಾ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿದೆ ಆದರೆ ಸಾಕಷ್ಟು ಕ್ರಮದ ಕೊರತೆಯಿದೆ ಎಂದು ಹೇಳಿದ್ದಾರೆ.

ಭಾರತವು ಕಟ್ಟಿಕೆ ಅಡುಗೆಮನೆ ಕಮ್ಮಿಯಾಗಿದೆ ಈಗಾಗಲೇ ಎಲ್ ಪಿಜಿ ಅನಿಲಕ್ಕೆ ಬಳಕೆ ಹೆಚ್ಚಾಗಿದೆ ಆದರೆ ನಾವು ಹೆಚ್ಚುವರಿ ಸಿಲಿಂಡರ್‌ಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು. ಆದರೆ ಬಡ ಕುಟುಂಬಗಳು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಬ್ಸಿಡಿಗಳನ್ನು ಪಡೆಯಬೇಕು. ಇದು ಅವರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೊರಾಂಗಣ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ, ಎಂದು ಅವರು ತಿಳಿಸಿದರು.

ನಗರಗಳಲ್ಲಿ, ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಮತ್ತು ಮಾಲಿನ್ಯ ವಾಹನಗಳಿಗೆ ದಂಡ ವಿಧಿಸಬೇಕು. ಪ್ರೋತ್ಸಾಹ ಮತ್ತು ದಂಡ ಮಿಶ್ರಣ ಅಗತ್ಯ ಎಂದು ಅವರು ಹೇಳಿದರು.

RELATED ARTICLES

Latest News