Sunday, July 27, 2025
Homeಬೆಂಗಳೂರುಬೆಂಗಳೂರಿನ ಶಿವಾಜಿನಗರದಲ್ಲಿ 14 ಬಾಲ-ಕಿಶೋರ ಕಾರ್ಮಿಕರ ರಕ್ಷಣೆ

ಬೆಂಗಳೂರಿನ ಶಿವಾಜಿನಗರದಲ್ಲಿ 14 ಬಾಲ-ಕಿಶೋರ ಕಾರ್ಮಿಕರ ರಕ್ಷಣೆ

14 child laborers rescued in Shivajinagar, Bengaluru

ಬೆಂಗಳೂರು, ಜು.24– ರಾಜಧಾನಿ ಬೆಂಗಳೂರಿನ ಶಿವಾಜಿನಗರದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿರುವ ಕಾರ್ಮಿಕ ಇಲಾಖೆಯ ನಿರೀಕ್ಷಕರು, ಒಟ್ಟು 14 ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಾಜಿನಗರ ವಾರ್ಡಿನಲ್ಲಿ ಬಾಲಕಾರ್ಮಿಕ ಕಿಶೋರ ಕಾರ್ಮಿಕರ ಕಾಯ್ದೆ ಅಡಿ ಕಾರ್ಮಿಕ ಇಲಾಖೆ ಹಿರಿಯ ಇನ್ಸ್‌ಪೆಕ್ಟ‌ರ್ ಸಿ.ಎನ್.ರಾಜೇಶ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ಈ ವೇಳೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ನೀಡುವ ಮುಖಾಂತರ ಬಾಲಕಾರ್ಮಿಕತೆ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಸಾಕು ಪ್ರಾಣಿಗಳ ಮಾರಾಟ ಮಳಿಗೆ, ಹೋಟೆಲ್ ಹಾಗೂ ಬ್ಯಾಗ್ ತಯಾರಿಕೆ ಘಟಕದಲ್ಲಿ ಸೇರಿದಂತೆ ಒಟ್ಟು 14 ಬಾಲ ಹಾಗೂ ಕಿಶೋರ ಕಾರ್ಮಿಕರು ಸಂರಕ್ಷಿಸಲಾಯಿತು. ಎಲ್ಲ ಮಕ್ಕಳನ್ನು ಬೆಂಗಳೂರು ಬಾಲಕರ ಬಾಲಮಂದಿರಕ್ಕೆ ಹಾಜರಿ ಪಡಿಸಲು ಹಾಗೂ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಬಾಸ್ಕೊ ಸಿಬ್ಬಂದಿಗಳು ಸೇರಿದಂತೆ ಪ್ರಮುಖರಿದ್ದರು.

RELATED ARTICLES

Latest News