Saturday, August 23, 2025
Homeರಾಷ್ಟ್ರೀಯ | Nationalಶಾಲೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ವಿದ್ಯಾರ್ಥಿ

ಶಾಲೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ವಿದ್ಯಾರ್ಥಿ

14-year-old threatens to blow up school in Uttarakhand

ರುದ್ರಾಪುರ(ಉತ್ತರಾಖಂಡ್‌),ಆ.23- ಹದಿನಾಲ್ಕು ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯನ್ನೇ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ರಾಜ್ಯದ ಉದಂಸಿಂಗ್‌ ನಗರದಲ್ಲಿ ನಡೆದಿದ್ದಾರೆ.
ಉದಂಸಿಂಗ್‌ ನಗರ ಜಿಲ್ಲೆಯ ಕಾಶಿಪುರದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಮೇಲೆ ಗುಂಡು ಹಾರಿಸಿದ ಘಟನೆ ನಡೆದ ಒಂದು ದಿನದ ಅಂತರದಲ್ಲಿ ನಿನ್ನೆ ಬಾಜ್ಪುರ ಪ್ರದೇಶದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಶಾಲಾ ಆಡಳಿತ ಮಂಡಳಿ ಬಾಂಬ್‌ ಸ್ಫೋಟದ ಇ-ಮೇಲ್‌ ಅನ್ನು ಸ್ವೀಕರಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸ್‌‍ ದಂಡ ಶ್ವಾನದಳದ ಸಹಾಯದಿಂದ ನೈನಿತಾಲ್‌ ರಸ್ತೆಯಲ್ಲಿರುವ ಶಾಲಾ ಆವರಣದಲ್ಲಿ ಸಂಪೂರ್ಣ ಶೋಧ ನಡೆಸಿತ್ತು. ಯಾವುದೇ ಆನುಮಾನಸ್ಪದ ವಸ್ತು ಸಿಗದೇ ಹೋದ ಕಾರಣ ಇದು ಹುಸಿಬಾಂಬ್‌ ಬೆದರಿಕೆ ಎಂದು ಘೋಷಿಸಿದ್ದರು.

ಬಳಿಕ ಶಾಲಾ ಆಡಳಿತ ಮಂಡಳಿ ಬೆದರಿಕೆ ಹಾಕಿದ 14 ವರ್ಷದ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಬಾಲಕನನ್ನು ಕೌನ್ಸಿಲಿಂಗ್‌ ನಡೆಸಿ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ. ಪರೀಕ್ಷೆಗೆ ಓದಲು ಸಾಧ್ಯವಾಗದಿದ್ದ ಹಿನ್ನೆಲೆ ಶಾಲೆಗೆ ರಜೆ ನೀಡುವ ಉದ್ದೇಶಕ್ಕೆ ಹುಸಿ ಬಾಂಬ್‌ ಬೆದರಿಕೆಯ ಇ-ಮೇಲ್‌ ಕಳುಹಿಸಿದ್ದೆ ಎಂದು ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ.

RELATED ARTICLES

Latest News