Sunday, August 24, 2025
Homeರಾಷ್ಟ್ರೀಯ | Nationalಗುಜರಾತ್‌ನ ಕಚ್‌ನ ಗಡಿಯ ಬಳಿ 15 ಪಾಕಿಸ್ತಾನಿ ಮೀನುಗಾರರ ಬಂಧನ

ಗುಜರಾತ್‌ನ ಕಚ್‌ನ ಗಡಿಯ ಬಳಿ 15 ಪಾಕಿಸ್ತಾನಿ ಮೀನುಗಾರರ ಬಂಧನ

15 Pakistani Fishermen Arrested Near Border In Gujarat's Kori Creek

ಭುಜ್‌‍, ಆ.24– ಗುಜರಾತ್‌ನ ಕಚ್‌ ಜಿಲ್ಲೆಯ ಭಾರತ-ಪಾಕ್‌ ಗಡಿಯ ಬಳಿ ಗಡಿ ಭದ್ರತಾ ಪಡೆ 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದೆ.ರಾಜ್ಯದ ಕಚ್‌ ಪ್ರದೇಶದ ಕೋರಿ ಕ್ರೀಕ್‌ನಲ್ಲಿರುವ ಗಡಿ ಔಟ್‌ ಪೋಸ್ಟ್‌ನ ಸಾಮಾನ್ಯ ಪ್ರದೇಶದಲ್ಲಿ ಪತ್ತೆಯಾದ ಅಪರಿಚಿತ ದೋಣಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಬಿಎಸ್‌‍ಎಫ್‌‍ ಶೋಧ ಕಾರ್ಯಾಚರಣೆ ನಡೆಸಿದೆ.

ಪಕ್ಕದ ಬೆಟ್‌ಗಳಲ್ಲಿ ವ್ಯಾಪಕ ಶೋಧ ನಡೆಸಲಾಯಿತು ಮತ್ತು ಶೋಧದ ಸಮಯದಲ್ಲಿ, 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿ, ಎಂಜಿನ್‌ ಅಳವಡಿಸಿದ ಕಂಟ್ರಿ ಬೋಟ್‌ಅನ್ನುವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್‌‍ಎಫ್‌ ತಿಳಿಸಿದೆ.

ಇವರು ಮೀನುಗಾರರಾಗಿದ್ದು, ಪಾಕ್‌ನ ಸಿಂಧಿ ಪ್ರಾಂತ್ಯದ ಸುಜಾವಲ್‌ ಜಿಲ್ಲೆಯವರು,ಬಿಎಸ್‌‍ಎಫ್‌ನ 68 ನೇ ಬೆಟಾಲಿಯನ್‌ನ ಗಡಿ ಔಟ್‌ಪೋಸ್ಟ್‌ನ ಪ್ರದೇಶದಲ್ಲಿ ಇವರು ಕಂಡುಬಂದಿದ್ದಾರೆ ಎಂದು ಅದು ಹೇಳಿದೆ.

ದೋಣಿಯಲ್ಲಿ ಸುಮಾರು 60 ಕೆಜಿ ಮೀನು, ಒಂಬತ್ತು ಮೀನುಗಾರಿಕಾ ಬಲೆಗಳು, ಡೀಸೆಲ್‌‍, ಐಸ್‌‍, ಆಹಾರ ಪದಾರ್ಥಗಳು ಮತ್ತು ಮರದ ಕೋಲುಗಳು ಇದ್ದವು. ಅವರ ಬಳಿಯಿಂದ ಒಂದು ಮೊಬೈಲ್‌ ಫೋನ್‌ ಮತ್ತು ಪಾಕಿಸ್ತಾನಿ ಕರೆನ್ಸಿಯಲ್ಲಿ 200 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಹೆಚ್ಚನ ತನಿಖೆ ನಡೆದಿದೆ ಎಂದು ಬಿಎಸ್‌‍ಎಫ್‌ ತಿಳಿಸಿದೆ.

RELATED ARTICLES

Latest News