Friday, November 22, 2024
Homeರಾಷ್ಟ್ರೀಯ | NationalBIG NEWS : ನಿಷೇಧಿತ ಪಿಎಫ್‍ಐನ 15 ಮಂದಿಗೆ ಮರಣದಂಡನೆ

BIG NEWS : ನಿಷೇಧಿತ ಪಿಎಫ್‍ಐನ 15 ಮಂದಿಗೆ ಮರಣದಂಡನೆ

ತಿರುವಂತನಪುರಂ,ಜ.30-ಕೇರಳದ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸನ್ ಅವರನ್ನು ಭರ್ಬರವಾಗಿ ಹತ್ಯೆ ಮಾಡಿದ್ದ ನಿಷೇಧಿತ ಪಿಎಫ್‍ಐನ 15 ಮಂದಿ ಗೆ ಅಲಪ್ಪುಳ ನ್ಯಾಯಾಲಯವು ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಇತ್ತೀಚಿನ ದಶಕಗಳಲ್ಲೇ ಎಲ್ಲಾ ಅಪರಾಧಗಳಿಗೆ ನ್ಯಾಯಾಲಯವು ಮರಣದಂಡನೆ ಶಿಕ್ಷ ವಿಧಿಸಿರುವ ಅತೀ ದೊಡ್ಡ ಪ್ರಕರಣ ಇದಾಗಿದೆ.

2021ರ ಡಿಸೆಂಬರ್ 19ರಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯನ್ನು ಅವರ ಮನೆಯಲ್ಲೇ ತಾಯಿ, ಪತ್ನಿ ಮತ್ತು ಮಕ್ಕಳ ಎದುರೇ ಪಿಎಫ್‍ಐ ಕಾರ್ಯಕರ್ತರು ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಇದು ದೇಶದದ್ಯಾಂತ ಭಾರೀ ಸದ್ದು ಮಾಡಿತ್ತು. ಪ್ರಕರಣದ ಕುರಿತು ಸುೀಧಿರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾೀಧಿಶ ವಿ.ಜಿ ಶ್ರೀದೇವಿ ಅವರು ಇಂದು ಶಿಕ್ಷೆಯನ್ನು ಪ್ರಕಟಿಸಿದರು.

ದ್ವೇಷದ ಬಿರುಗಾಳಿಯಲ್ಲಿ ಸತ್ಯದ ಜ್ವಾಲೆ ನಂದಿಸಲು ಬಿಡಬಾರದು : ಕಾಂಗ್ರೆಸ್

ಆಪರಾಧಿಗಳಾದ ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಸಫರುದ್ದೀನ್, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ ಪೂವತುಂಗಲ್ ಮತ್ತು ಶೆರ್ನಾಸ್ ಅಶ್ರಫ್ ಅವರುಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.ಎಲ್ಲಾ ಆರೋಪಿಗಳು ಈಗ ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ಅದರ ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಸದಸ್ಯರಾಗಿದ್ದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿತ್ತು. ಅವರು ತರಬೇತಿ ಪಡೆದ ಕೊಲೆಗಾರರಾಗಿದ್ದಾರೆ. ತಾಯಿ, ಶಿಶು ಮತ್ತು ಹೆಂಡತಿಯ ಮುಂದೆ ಕೊಲ್ಲಲ್ಪಟ್ಟ ಕ್ರೂರ ಮತ್ತು ಪೈಶಾಚಿಕ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ. ಹೀಗಾಗಿ ಎಲ್ಲಾ ಆರೋಪಿಗಳಿಗೆ ಗರಿಷ್ಟ ಶಿಕ್ಷೆ ವಿಧಿಸುವಂತೆ ಕೋರಲಾಗಿತ್ತು.ಇದೊಂದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಹೇಳಿದ್ದ ನ್ಯಾಯಾಲಯ,ಅಪರಾಗಳನ್ನು ಅಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಾನಸಿಕ ಸ್ಥಿರತೆ ಪರೀಕ್ಷೆಗೆ ಒಳಪಡಿಸಿತ್ತು.

ಎಸ್‍ಡಿಪಿಐ ಮುಖಂಡ ಕೆ.ಎಸ್.ಶಾನ್ ಅವರು ಡಿಸೆಂಬರ್ 18ರಂದು ರಾತ್ರಿ ಅಲಪ್ಪುಳದಲ್ಲಿ ಮನೆಗೆ ಮರಳುತ್ತಿದ್ದಾಗ ತಂಡವೊಂದು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಬಿಜೆಪಿ ನಾಯಕನ ಹತ್ಯೆ ನಡೆದಿತ್ತು.ಘೋರ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಮೊದಲ ಎಂಟು ಆರೋಪಿಗಳನ್ನು ಸೆಕ್ಷನ್ 302 (ಕೊಲೆ), 149 (ಕಾನೂನುಬಾಹಿರ ಸಭೆ), 449 (ಮರಣ ದಂಡನೆಗೆ ಒಳಪಡುವ ಅಪರಾಧವನ್ನು ಮಾಡಲು ಮನೆ ಅತಿಕ್ರಮಣ), 506 (ಅಪರಾಧ ಬೆದರಿಕೆ), ಮತ್ತು 341 ( ಭಾರತೀಯ ದಂಡ ಸಂಹಿತೆಯ) ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ದೂರು ದಾಖಲಾಗಿತ್ತು.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಅನ್ನೊದು ಜುಮ್ಲಾ : ಪ್ರಿಯಾಂಕಾ

ಅಪರಾಧ ಎಸಗಿದಾಗ ಮಾರಕಾಸ್ತ್ರಗಳೊಂದಿಗೆ ಬಿಜೆಪಿ ನಾಯಕನ ಮನೆಯ ಹೊರಗೆ ಕಾವಲು ಕಾಯುತ್ತಿದ್ದ ಇತರ ಆರೋಪಿಗಳನ್ನು ಐಪಿಸಿಯ ಸೆಕ್ಷನ್ 302 ಆರ್/ಡಬ್ಲ್ಯೂ 149 ಮತ್ತು 447 (ಕ್ರಿಮಿನಲ್ ಅತಿಕ್ರಮಣ)ರಡಿ ದೋಷಾರೋಪಣೆ ಮಾಡಲಾಗಿತ್ತು. ಪ್ರಮುಖ ಸಂಚುಕೋರರಾದ ಝಾಕಿರ್, ಶಾಜಿ ಮತ್ತು ಶೆರ್ನಾಸ್ ಅವರು ಕ್ರಮವಾಗಿ ಐಪಿಸಿ ಸೆಕ್ಷನ್ 120 ಬಿ ಮತ್ತು 302ರಡಿ ಕ್ರಿಮಿನಲ್ ಪಿತೂರಿ ಮತ್ತು ಕೊಲೆಯ ತಪ್ಪಿತಸ್ಥರೆಂದು ಕಂಡುಬಂದಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‍ಎಸ್‍ಎಸ್) ಸೇರಿದ ಪ್ರಕರಣದ ಆರೋಪಿಗಳು ಪ್ರಸ್ತುತ ವಿಚಾರಣೆ ಎದುರಿಸುತ್ತಿದ್ದಾರೆ.

ಏನಿದು ಪ್ರಕರಣ?:
2021, ಡಿಸೆಂಬರ್ 19ರಂದು ಎಸ್‍ಡಿಪಿಐ ನಾಯಕ ಕೆ.ಎಸ್.ಶಾನ್ ಅವರು ತಮ್ಮ ಮನೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ದಾಳಿ ಎಸಗಿ ಭೀಕರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೊಚ್ಚಿ ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಕೆ.ಎಸ್.ಖಾನ್ ಹತ್ಯೆಯ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿತ್ತು.

ಹತ್ಯೆಯಾದ 12 ಗಂಟೆಯೊಳಗೆ ಪ್ರತೀಕಾರ ಎಂಬಂತೆ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆಯಾಗಿತ್ತು. ಮೇಲ್ನೋಟಕ್ಕೆ ಎಸ್‍ಡಿಪಿಐ ಮುಖಂಡನ ಹತ್ಯಗೆ ಪ್ರತೀಕಾರವಾಗಿ ರಂಜಿತ್ ಹತ್ಯೆಯಾಗಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದರು. ಅಲಪ್ಪುಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ರ್ಪಧಿಸಿ ಪರಾಭವಗೊಂಡಿದ್ದ ರಂಜಿತ್ ಶ್ರೀನಿವಾಸನ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು.

RELATED ARTICLES

Latest News