ಭುವನೇಶ್ವರ್, ನ.12 (ಪಿಟಿಐ)- ಹದಿನೈದು ವರ್ಷದ ಬಾಲಕ ಲಕ್ಷಾಂತರ ಮೌಲ್ಯದ ಬ್ರೌನ್ ಶುಗರ್ ಸಾಗಿಸುತ್ತಿದ್ದ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಬಾಲಕಿನ ಬಳಿ ಇದ್ದ 1.26 ಕೆಜಿ ತೂಕದ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದ ಆತನನ್ನು ಮೂರು ವರ್ಷಗಳ ಕಾಲ ಬಾಲಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಜುವೆನೈಲ್ ಜಸ್ಟೀಸ್ ಬೋರ್ಡ್‍ನವರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ (ಎನ್‍ಡಿಪಿಎಸ್) ಕಾಯ್ದೆ 1985 ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ ಹುಡುಗನನ್ನು ಬರ್ಹಾಂಪುರದ ವಿಶೇಷ ಮನೆಯಲ್ಲಿ ಇರಿಸಿದ್ದಾರೆ.
ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಮಾಲೋಚನೆ, ನಡವಳಿಕೆ ಮಾರ್ಪಾಡು ಚಿಕಿತ್ಸೆ, ಮನೋವೈದ್ಯಕೀಯ ಬೆಂಬಲ ಮತ್ತು ತಂಗಿರುವ ಅವಯಲ್ಲಿ ಚಿಕಿತ್ಸೆ ಸೇರಿದಂತೆ ಸುಧಾರಣಾ ಸೇವೆಗಳನ್ನು ಒದಗಿಸಲು ಮನೆಗೆ ನಿರ್ದೇಶಿಸಿದೆ. ಆಗಸ್ಟ್ 12, 2021 ರಂದು ಖುರ್ಧಾ ಬಸ್ ನಿಲ್ದಾಣದ ಬಳಿ 1.26 ಕೆಜಿ ಬ್ರೌನ್ ಶುಗರ್‍ನೊಂದಿಗೆ ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆಯಿಂದ ಬಾಲಕ ಇತರ ಮೂವರ ಜೊತೆಗೆ ಸಿಕ್ಕಿಬಿದ್ದಿದ್ದಾನೆ.
ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟುಮಾಡಿದ ಆರೋಪ : ಮಾಜಿ ಸಚಿವ ಸೇರಿ 8 ಮಂದಿ ವಿರುದ್ಧ ಕೇಸ್
ಹುಡುಗನಿಗೆ ಶಿಕ್ಷೆ ವಿಧಿಸುವ ಮೊದಲು ಹನ್ನೊಂದು ಸಾಕ್ಷಿಗಳು ಮತ್ತು ಇತರ ಸಾಕ್ಷ್ಯಗಳನ್ನು ಮಂಡಳಿಯು ಪರಿಶೀಲಿಸಿತು. ವಯಸ್ಕರಾದ ಉಳಿದ ಆರೋಪಿಗಳ ವಿಚಾರಣೆ ಸದ್ಯಕ್ಕೆ ನಡೆಯುತ್ತಿದೆ.