ಬೆಂಗಳೂರು,ಡಿ.30- ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ನಮನ್ನು ಆಗಲಿ ಇಂದಿಗೆ 15 ವರ್ಷಗಳೇ ಕಳೆದು ಹೋದವು. ಆದರೆ ಅವರು ಅಭಿನಯದ ಚಿತ್ರಗಳು ಮಾತ್ರ ಅವರನ್ನು ಇಂದಿಗೂ ಜೀವಂತವಾಗಿರಿಸಿವೆ.
ನಾಗರ ಹಾವಿನ ರಾಮಾಚಾರಿ ಕನ್ನಡ ಚಿತ್ರರಂಗದಲ್ಲಿ ಸಿಂಹದಂತೆ ಘರ್ಜಿಸಿ ಇಟ್ಟ ಹೆಜ್ಜೆಗಳ ಗುರುತುಗಳು ಮಾಸದಷ್ಟು ಗಟ್ಟಿಯಾಗಿವೆ. ಅಭಿಮಾನಿಗಳು ಅವರನ್ನು ಸದಾ ಒಂದಲ್ಲ ಒಂದು ರೀತಿಯಲ್ಲಿ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಇಂದು 15ನೇ ಪುಣ್ಯ ಸರಣೆ ಅಂಗವಾಗಿ ರಾಜ್ಯದೆಲ್ಲಡೆ ತಮ ಪ್ರೀತಿಯ ಕರ್ಣನನ್ನ ವಿವಿಧ ರೀತಿಯಲ್ಲಿ ನೆನೆಯುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನಸಂಪರ್ಪಣೆ, ಉಚಿತ ವೈದ್ಯಕೀಯ ತಪಾಸಣೆ, ಶಾಲಾ ಮಕ್ಕಳಿಗೆ ಆರ್ಥಿಕ ನೆರವು ಹೀಗೆ ವಿವಿಧ ರೀತಿಯಲ್ಲಿ ತಮ ನೆಚ್ಚಿನ ನಟನನ್ನು ಸರಿಸಿ ಪೂಜಿಸುತ್ತಿದ್ದಾರೆ. ಅಕಾಲಿಕವಾಗಿ ಅವರು ನಮನ್ನ ಆಗಲಿಲ್ಲವೆಂದಿದ್ದರೆ ಇಂದು ಕನ್ನಡ ಚಿತ್ರರಂಗದ ಯಜಮಾನನಾಗಿ ಮೆರೆಯುತ್ತಿದ್ದರು. ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎನ್ನುವುದೇ ಎಲ್ಲರ ಅಳಲು.
ಸಾಹಸಸಿಂಹ ವಿಷ್ಣು ವರ್ಧನ್ ಅವರು ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಅಂದರೆ ಇವರಿಗೆ ನೀರು ಕುಡಿದಂತೆ. ಯಾವುದೇ ಪಾತ್ರ ಕೊಟ್ಟರು ನೀಲಾ ಜಲವಾಗಿ ಅಭಿನಯಿಸುತ್ತಿದ್ದ ಕೆಲವೇ ನಟರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ನಟಿಸಿ ಅಲ್ಲಿಯೂ ತಮ ನಟನಾ ಸಾಮರ್ಥ್ಯವನ್ನು ತೋರಿದ್ದಾರೆ. ಇವರು 2009ರ ಡಿಸೆಂಬರ್ 30ರಂದು ನಮನ್ನಗಲಿದರು. ಸಾಹಸ ಸಿಂಹ ಮಾತ್ರವಲ್ಲದೆ ಅಭಿನಯ ಭಾರ್ಗವ, ಮೈಸೂರು ರತ್ನ ಇತ್ಯಾದಿ ಹಲವು ಬಿರುದುಗಳನ್ನು ಇವರು ಹೊಂದಿದ್ದರು.
ಇಂತಹ ನಮ ಆರಾಧ್ಯ ದೈವ ಡಾ. ವಿಷ್ಣುವರ್ಧನ್ ನಮನ್ನು ಅಗಲಿ 15 ವರ್ಷವಾದರೂ ಅವರಿಗೆ ನಿರ್ದಿಷ್ಟ ಸ್ಥಳ ಗುರುತಿಸಿ ಸಾರಕ ಮಾಡಲಿಲ್ಲ ಎನ್ನುವುದೇ ವಿಪರ್ಯಾಸದ ಸಂಗತಿ.
ಬೆಂಗಳೂರಿನಲ್ಲಿರುವ ಅಭಿಮಾನಿ ಸ್ಟುಡಿಯೋದಲ್ಲಿ ಅವರನ್ನು ಅಂತಿಮವಾಗಿ ಕಳಿಸಿಕೊಡಲಾಯಿತು.ಆ ಸ್ಥಳದಲ್ಲಿ ಸಾರಕವಾಗಬೇಕೆಂದು ಎಲ್ಲರೂ ಅಪೇಕ್ಷೆಪಟ್ಟರು.
ಅವರ ಅಭಿಮಾನಿಗಳು, ದೊಡ್ಡ ನಟರು ಸೇರಿದಂತೆ ಅನೇಕರು ತುಂಬಾ ಹೋರಾಟಗಳನ್ನು ಮಾಡಿದ್ದಾರೆ. ಆದರೆ ಯಾವ ಸರ್ಕಾರಗಳು ಕೂಡ ಮೇರು ನಟನನ್ನು ಸರಿಸಲೇ ಇಲ್ಲ.
ಅಭಿಮಾನಿ ಸ್ಟುಡಿಯೋ, ವಿವಾದಗಳಿಂದಾಗಿ ಇಂದಿಗೂ ಅಭಿಮಾನಿಗಳು ಅಲ್ಲಿ ಹೋಗಿ ಸ್ವತಂತ್ರವಾಗಿ ಪೂಜೆ ಸಲ್ಲಿಸಲಾಗದಷ್ಟು ಎಷ್ಟೋ ಕಾನೂನು ತೊಡಕುಗಳು ಬಂದು ಹೊದಿಗಿವೆ. ಆದರೂ ಅಲ್ಲಿ ಪ್ರತಿ ವರ್ಷ ಪುಣ್ಯಸರಣೆ ಕಾರ್ಯವನ್ನು ಮಾಡುತ್ತಾರೆ. ಈ ವರ್ಷವೂ ಕೂಡ ಅಲ್ಲಿಗೆ ಸಹಸ್ರಾರು ಅಭಿಮಾನಿಗಳು ಆಗಮಿಸಿ ಪೂಜೆ ಸಲ್ಲಿಸುವುದರ ಮೂಲಕ ನೆಚ್ಚಿನ ನಟನನ್ನು ನೆನೆದಿದ್ದಾರೆ.
ವಿ.ಎಸ್.ಎಸ್.ಅಭಿಮಾನ್ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ನ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ರಾಜು ಗೌಡ ಅವರ ನೇತೃತ್ವದಲ್ಲಿ ಇಂದು ರಕ್ತದಾನ ಶಿಬಿರ ಮತ್ತು ಅನ್ನಸಂತರ್ಪಣೆ ಕಾರ್ಯ ನಡೆದಿದೆ. ಈಗಲಾದರೂ ಸರ್ಕಾರ ಮುಂದೆ ಬಂದು ವಿಷ್ಣು ಸಾರಕದ ಬಗ್ಗೆ ಒಂದು ನಿರ್ದಿಷ್ಟ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಅಭಿಮಾನಿಗಳ ಆಸೆಯನ್ನು ಈಡೇರಿಸಬೇಕೆನ್ನುವುದೇ ಎಲ್ಲರ ಆಶಯ.
ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಭಾರತಿ ವಿಷ್ಣುವರ್ಧನ್
ಉದ್ಬೂರ್ ಗೇಟ್ ಬಲಿ ಇರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಮಾಳಾರ್ಪಣೆ ಮಾಡಿ ನಂತರ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ವಿಷ್ಣುವರ್ಧನ್ ರವರ ಕೋಟಿಗೊಬ್ಬ 2025 ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಂತರ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. 60ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಬಲಿಕ ಅಭಿಮಾನಿಗಳಿಗೆ ಅನ್ನ ಸಂತರ್ಪನಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಆಲ್ವಿನ್,ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಎಂ ಎನ್ ಚೇತನ್ ಗೌಡ, ಲಕ್ಷ್ಮಣ, ಮಹದೇವ್, ಜೀವದಾರ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಸುರೇಶ್, ಪ್ರಭು, ಸಂತೋಷ್ ,ಸಿದ್ದಪ್ಪ, ಬಸವರಾಜು, ಹಾಗೂ ಇನ್ನಿತರರು ಹಾಜರಿದ್ದರು.