ಇಂದೋರ್, ಮೇ 15- ಯುಕನನ್ನು ಬರ್ಬಕವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಪಾರಿ ಹಂತಕರನ್ನು ಎನ್‌ಕೌಂಟರ್‌ನಲ್ಲಿ ಬಂಧಿಸಲಾಗಿದೆ. ಶಾಕಿರ್ (23) ಮತ್ತು ಅಮನ್ ಶಾ (22)ಬಂಧಿತ ಆರೋಪಿಗಳಾಗಿದ್ದು,ಇಂದೋರ್ ನಗರದಲ್ಲಿ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳದೆ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಕಾಣಿಸಿಕೊಂಡಿದ್ದ ಅವರಿಬ್ಬರಿಗೂ ಶರಣಾಗಲು ಸಾಕಷ್ಟು ಅವಕಾಶ ನೀಡಲಾಯಿತು, ಆದರೆ ಅವರು ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದರು ಎಂದು ನಗರ ಪೊಲೀಸ್ ಉಪ ಆಯುಕ್ತ ವಿನೋದ್ ಕುಮಾರ್ ಮೀನಾ ಸುದ್ದಿಗಾರರಿಗೆ ತಿಳಿಸಿದರು.
ಕೊನೆಗೆ ನಾವು ಎನ್‌ಕೌಂಟರ್ ನಡೆಸಿದಾಗ ಒಬ್ಬ ಆರೋಪಿ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದರು.ಆರೋಪಿಗಳು ಹಾರಿಸಿದ ಗುಂಡುಗಳಲ್ಲಿ ಒಂದು ಪೊಲೀಸ್ ಜೀಪಿನ ಗಾಜಿಗೆ ತಗುಲಿ ಇನ್‌್ಸಪೆಕ್ಟರ್ ಕಿವಿಯ ಹತ್ತಿರ ಹಾದು ಹೋಗಿದೆ .ಆತ್ಮರಕ್ಷಣೆಗಾಗಿ ಪೊಲೀಸ್ ತಂಡ ಗುಂಡು ಹಾರಿಸಿದಾಗ ಒಂದು ಗುಂಡು ಶಾಕಿರ್‌ನ ಕಾಲಿಗೆ ತಗುಲಿದೆ.ನಂತರ ಶಾ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ ಎಂದು ಅವರು ಹೇಳಿದರು.
ಪೊಲೀಸರ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಶಾಕಿರ್‌ನನ್ನು ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಶಾಕಿರ್ ಮತ್ತು ಶಾ ಆಜಾದ್ ನಗರ ಪ್ರದೇಶದಲ್ಲಿ ಕಳೆದ ಮೇ 12 ರಂದು ರಾತ್ರಿ ಮೋಯಿನ್ ಖಾನ್ (20) ಎಂಬ ಯುವಕನನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಮೃತ ಮೋಯಿನ್ ಖಾನ್ ಸಹೋದರ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು ಆದರೆ ಯುವತಿ ಮನೆಯವರಿಗೆ ಇದು ಇಷ್ಟ ಇರಲಿಲಲ್ಲಿದರಿಮದ ಖಾನ್‌ನನ್ನು ಕೊಲ್ಲಲು ಶಾಕಿರ್ ಮತ್ತು ಷಾಗೆ 3 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು ಎಂದು ಅವರು ಹೇಳಿದರು.