ಬೆಂಗಳೂರು, ಜ.14- ನವದೆಹಲಿಯ ಪಿಆರ್‌ಲೆಜಿಸ್‌ಶಾಸಕಾಂಗ ಸಂಶೋಧನಾ ಸಂಸ್ಥೆಯು ದೇಶದ ವಿವಿಧ ರಾಜ್ಯಗಳ ವಿಧಾನಸಭೆಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.
ನವದೆಹಲಿಯಲ್ಲಿ ಜ.16 ಮತ್ತು 17ರಂದು ನಡೆಯುವ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ರಾಜ್ಯದ 15 ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಿಯೋಜಿಸಿದ್ದಾರೆ.
ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ್, ಡಾ.ಮಂತರಗೌಡ, ಕೆ.ಎಸ್.ಬಸವಂತಪ್ಪ, ಎ.ಸಿ.ಶ್ರೀನಿವಾಸ್, ಬಿ.ಬಿ.ಚಿಮನಕಟ್ಟಿ, ಪ್ರಕಾಶ್ ಕೋಳಿವಾಡ, ಬಾಬಾ ಸಾಹೇಬ್ ಪಾಟೀಲ್, ಹೆಚ್.ವಿ.ವೆಂಕಟೇಶ, ಶರಣಗೌಡ ಕಂದಕೂರು, ದರ್ಶನ್ ಪುಟ್ಟಣ್ಣಯ್ಯ, ಉಮಾನಾಥ್ ಕೋಟ್ಯಾನ್, ಕಿರಣ್‌ಕುಮಾರ್ ಕೂಡ್ಗಿ, ಬಸವರಾಜ ಶಿವಗಂಗಾ, ಬಸವರಾಜ ಮತ್ತಿಮೊಡ, ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರನ್ನು ಕಾರ್ಯಗಾರದಲ್ಲಿ ಭಾಗವಿಸುವಂತೆ ಸಭಾಧ್ಯಕ್ಷರು ನಿಯೋಜಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆಯ ಕಾರ್ಯಕಲಾಪಗಳು ಯಶಸ್ವಿಯಾಗಿ ಮತ್ತು ಕ್ರಿಯಾಶೀಲತೆಯಿಂದ ನಡೆಯುವ ದಿಸೆಯಲ್ಲಿ 16ನೇ ವಿಧಾನಸಭೆಯ 5ನೇ ಅಧಿವೇಶನದ ಕಲಾಪಗಳಲ್ಲಿ ನಿಗದಿತ ಸಮಯಕ್ಕೆ ಸದನದಲ್ಲಿ ಉಪಸ್ಥಿತರಿದ್ದ ಸದಸ್ಯರನ್ನು ಪ್ರೋತ್ಸಾಹದಾಯಕವಾಗಿ ತರಬೇತಿ ಕಾರ್ಯಗಾರಕ್ಕೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.