Wednesday, October 23, 2024
Homeರಾಜಕೀಯ | Politicsಕಾಂಗ್ರೆಸ್ ಸೇರ್ಪಡೆಯೊಂದಿಗೆ 2 ಲಕ್ಷ ಕಟ್ಟಡ ನಿಧಿ ಪಾವತಿಸಿದ ಸಿ.ಪಿ.ಯೋಗೇಶ್ವರ್

ಕಾಂಗ್ರೆಸ್ ಸೇರ್ಪಡೆಯೊಂದಿಗೆ 2 ಲಕ್ಷ ಕಟ್ಟಡ ನಿಧಿ ಪಾವತಿಸಿದ ಸಿ.ಪಿ.ಯೋಗೇಶ್ವರ್

2 lakh building fund paid CPY with ``hand'' addition

ಬೆಂಗಳೂರು,ಅ.23- ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಅರ್ಜಿ ಸಲ್ಲಿಸುವ ಜೊತೆಗೆ ಟಿಕೆಟ್ಗಾಗಿಯೂ ಅರ್ಜಿ ಸಲ್ಲಿಸಿ 2 ಲಕ್ಷ ರೂ.ಗಳ ಕಟ್ಟಡ ನಿಧಿಯನ್ನು ಪಾವತಿಸಿದ್ದಾರೆ. 5 ಬಾರಿ ಶಾಸಕರಾಗಿ ಒಮೆ ವಿಧಾನಪರಿಷತ್ ಸದಸ್ಯ ರಾಗಿ, ಸಚಿವರಾಗಿ ಕೆಲಸ ಮಾಡಿರುವ ಹಿರಿಯ ನಾಯಕ ಸಿ.ಪಿ.ಯೋಗೇಶ್ವರ್ ಹಳೆ ಮೈಸೂರು ಭಾಗದ 10 ಜಿಲ್ಲೆಗಳ 85 ಕ್ಷೇತ್ರಗಳಲ್ಲಿ ಪ್ರಭಾವಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

1999 ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಟಿವಿ ಗುರಿತಿನೊಂದಿಗೆ ಗೆಲುವು ಸಾಧಿಸಿದ್ದರು. 2004-2008 ರಲ್ಲಿ ಕಾಂಗ್ರೆಸ್ನಿಂದ ಶಾಕಸರಾದರೆ, 2009ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2011 ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿ ಶಾಸಕರಾಗಿ ಭಾರಿ ಅಂತರದಿಂದ ಗೆಲುವು ಕಂಡರು. 2013 ರಲ್ಲಿ ಸಮಾಜವಾದಿ ಪಕ್ಷಗಳ ಶಾಸಕರಾಗಿ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿದ್ದರು. 2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡರು. ಆದರೂ ವಿಧಾನಪರಿಷತ್ ಸದಸ್ಯರಾಗಿ 2021 ರಲ್ಲಿ ಪ್ರವಾಸೋದ್ಯಮ ಸಚಿವರಾಗಿ ಬಿಜೆಪಿ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ.

ಇಂದು ಇಡೀ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಸ್ಪರ್ಧಿಯಾಗಲು ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕಾಗಿ 2 ಲಕ್ಷ ರೂ.ಗಳ ಕಟ್ಟಡ ನಿಧಿಯನ್ನು ಚೆಕ್ ಮೂಲಕ ಪಾವತಿಸಿದ್ದಾರೆ.
ಇಂದು ಬೆಳಿಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ , ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಗಂಗಾಧರ್ ಅವರು ಸಿ.ಪಿ.ಯೋಗೇಶ್ವರ್ ಸೇರ್ಪಡೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ಗೆ ಖಾತ್ರಿಪಡಿಸಿದ್ದಾರೆ.


ಹೈಕಮಾಂಡ್ಗೆ ಪಟ್ಟಿ ರವಾನೆ :
ಸಿ.ಪಿ.ಯೋಗೇಶ್ವರ್ರವರ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ರವರು ಯಾವುದೇ ಷರತ್ತಿಲ್ಲದೆ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ತಾವು ಹೈಕಮಾಂಡ್ಗೆ ಪಟ್ಟಿ ರವಾನಿಸುತ್ತಿದ್ದು, ಅದರಲ್ಲಿ ಸಿ.ಪಿ.ಯೋಗೇಶ್ವರ್ ಅವರ ಹೆಸರಿನೊಂದಿಗೆ ಇನ್ನೊಬ್ಬರ ಹೆಸರನ್ನೂ ಸೇರಿಸಿ, ಇಬ್ಬರು ಸಂಭವನೀಯರನ್ನು ಶಿಫಾರಸ್ಸು ಮಾಡಲಾಗಿದೆ. ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆಯೋ ಅವರು ನಾಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.

RELATED ARTICLES

Latest News