ಕುಶಿನಗರ, ಸೆ.1- ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದ ಇಬ್ಬರು ಪುಂಡಿಗೆ ಪೊಲೀಸರು ಗುಂಡಿನ ರುಚಿ ತೋರಿಸಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮೊರಾವನ್ ಬರ್ಕಾ ಟೋಲಾ ಗ್ರಾಮದ ಮೂಲದವರಾಗಿದ್ದು, ಅಸ್ಲಂ ಮತ್ತು ಜುಲ್ಫಿಕರ್ ಬಂಧಿತ ಆರೋಪಿಗಳು, ಲವ್ ಜಿಹಾದ್ ಪ್ರೇರೆಪಿಸಿ ಈ ಆರೋಪಿಗಳನ್ನು ಬಾಲಕಿಯರನ್ನು ಪ್ರೕತಿ ಬಲೆ ಬೀಳಿಸಿ ದೌರ್ಜನ್ಯ ನಡೆಸುತ್ತಿದ್ದರು ಇದಕ್ಕೆ ಇವರಿಗೆ ತಲಾ 25,000 ರೂ.ನೀಡಲಾಗುತ್ತಿತ್ತು ಎಮದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಾದ ನಂತರ ರಾಮ್ಕೋಲಾ ಠಾಣೆ ಪೊಲೀಸರು ಆರೋಪಿ ಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದಾಗ ನಮ ಮೇಲೆ ಗುಂಡು ಹಾರಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ .
ಕುಸುಮಹಾ ಸೇತುವೆಯ ಬಳಿ ಮುಂಜಾನೆ 4 ಗಂಟೆ ಸುಮಾರಿಗೆ ನಾಕಾಬಂಧಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ ಇಬ್ಬರೂ ಆರೋಪಿಗಳು ಗಾಯಗೊಂಡರು ಎಂದು ಮಾಹಿತಿ ನೀಡಿದ್ದಾರೆ.
ಎರಡು ದೇಶೀಯ ನಿರ್ಮಿತ ಪಿಸ್ತೂಲ್‌ಗಳು, ಮದ್ದುಗುಂಡುಗಳು, ನಂಬರ್ ಪ್ಲೇಟ್ ಇಲ್ಲದ ಮೋಟಾರ್‌ಸೈಕಲ್ ಮತ್ತು 1,100 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅರೋಪಿಗಳು ಶಾಲೆಗಳ ಬಳಿ ಹುಡುಗಿಯರಿಗೆ ಆಮಿಷವೊಡ್ಡುತ್ತಿದ್ದರು ಅಲ್ಲದೆ ಇವರು ಹಿಂದೂಗಳಂತೆ ನಟಿಸುತ್ತಿದ್ದಾರೆ ಎಂದು ಮಿಶ್ರಾ ಹೇಳಿದರು.ಇಬ್ಬರ ವಿರುದ್ಧ ವಿವಿಧ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.
- ರಷ್ಯಾ ತೈಲ ಖರೀದಿಸಿ ಬ್ರಾಹಣರು ಲಾಭ ಮಾಡಿಕೊಳ್ಳುತ್ತಿದ್ದಾರೆ : ಅರ್ಥವಿಲ್ಲದ ಆರೋಪ ಮಾಡಿದ ಅಮೆರಿಕ
- ಡ್ರ್ಯಾಗನ್ ಎದುರು ಶರಣಾದ ಮೋದಿ : ಚೀನಾ ಓಲೈಕೆಯನ್ನು ಖಂಡಿಸಿದ ಕಾಂಗ್ರೆಸ್
- ಬೆಂಗಳೂರು : ಗಂಡನ ಕಿರುಕುಳದಿಂದ ನೊಂದು ಗೃಹಿಣಿ ಆತ್ಮಹತ್ಯೆ
- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ವಾರಾಂತ್ಯದವರೆಗೆ ಮಳೆ ಮುಂದುವರಿಕೆ
- ಫೇಸ್ಬುಕ್ ಗೆಳೆಯನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ