Friday, April 4, 2025
Homeರಾಷ್ಟ್ರೀಯ | National10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾದ ಅತ್ಯಾಚಾರ ಸಂತ್ರಸ್ತೆ

10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾದ ಅತ್ಯಾಚಾರ ಸಂತ್ರಸ್ತೆ

ಹೈದರಾಬಾದ್‌, ಮೇ9- ತೆಲಂಗಾಣದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತ ಬಾಲಕಿಯೊಬ್ಬಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತೀವ್ರ ಆಘಾತದ ಸಂದರ್ಭದಲ್ಲೂ ತಮ ದೃಢತೆಯನ್ನು ಪ್ರದರ್ಶಿಸಿದ್ದಾರೆ.

2023ರಲ್ಲಿ 15 ಬಾಲಕಿಯೊಬ್ಬಳು ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದರು. ಆಕೆಯ ಹೊಟ್ಟೆ ನೋವಿನ ಬಗ್ಗೆ ಅಜ್ಜಿಗೆ ತಿಳಿಸಿದಾಗ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಆಕೆ ಗರ್ಭಿಣೆಯಾಗಿದ್ದಾಳೆ ಎಂದು ತಿಳಿಸಿದ್ದರು.

ಆಕೆಯ ಗರ್ಭಾವಸ್ಥೆಯು ಮುಂದುವರಿದ ಹಂತದಲ್ಲಿದ್ದುದರಿಂದ ಅದನ್ನು ಸ್ಥಗಿತಗೊಳಿಸಲಾಗಲಿಲ್ಲ. ಆಕೆ ಒಂಬತ್ತನೇ ತಿಂಗಳಲ್ಲಿ ಮಗುವಿಗೆ ಜನ ನೀಡಿದ್ದಾಳೆ. ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾಳೆ ಎಂದು ಪೊಲೀಸ್‌‍ ಅಧಿಕಾರಿ ಎಂ. ಮಹೇಂದರ್‌ ರೆಡ್ಡಿ ತಿಳಿಸಿದ್ದಾರೆ.

RELATED ARTICLES

Latest News