ಮುಂಬೈ, ಫೆ 6 (ಪಿಟಿಐ)– ಕಳೆದ ತಿಂಗಳು ಸೈಫ್ ಅಲಿಖಾನ್ ಅವರ ಮನೆಗೆ ನುಗ್ಗಿ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ಬಾಂಗ್ಲಾದೇಶದ ವ್ಯಕ್ತಿ ಶರೀಫುಲ್ ಫಕೀರ್ ಎಂಬುದು ದೃಢಪಟ್ಟಿದೆ.ಸೈಫ್ ನಿವಾಸದ ಇಬ್ಬರು ಸಿಬ್ಬಂದಿಗಳು ಆರೋಪಿಯನ್ನುಗುರುತಿಸಿದ್ದಾರೆ.
ಮತ್ತು ಆತನೇ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ ಎನ್ನುವುದನ್ನು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮದ್ ರೋಹಿಲ್ಲಾ ಅಮೀನ್ ಫಕೀರ್ (30) ಅಲಿಯಾಸ್ ವಿಜಯ್ ದಾಸ್ ಅವರನ್ನು ಕಳೆದ ತಿಂಗಳು ನಟನಿಗೆ ಇರಿದ ಆರೋಪದ ಮೇಲೆ ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಖಾನ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಲ್ಲಿನ ಆರ್ಥರ್ ರೋಡ್ ಜೈಲಿನಲ್ಲಿ ಗುರುತಿನ ಪರೇಡ್ ನಡೆಸಿದರು ಎಂದು ಅವರು ಹೇಳಿದರು.ಖಾನ್ ಅವರ ನಿವಾಸದ ಸಿಬ್ಬಂದಿ ಎಲಿಯಮ ಫಿಲಿಪ್ (56) ಮತ್ತು ಗಹ ಸಹಾಯಕ ಜುನು ನಟನ ಮೇಲೆ ದಾಳಿ ಮಾಡಿದ ವ್ಯಕ್ತಿ ಶರೀಫುಲ್ ಎಂದು ಗುರುತಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಹಸೀಲ್ದಾರ್ ಹಾಗೂ ಐವರು ಪಂಚರ ಸಮುಖದಲ್ಲಿ ಗುರುತಿನ ಪರೇಡ್ ನಡೆಸಲಾಯಿತು. ಫಿಲಿಪ್ ಪ್ರಕರಣದ ಪ್ರಾಥಮಿಕ ಸಾಕ್ಷಿಯಾಗಿದ್ದು, ಆಕೆಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾನ್ಗೆ ಇರಿದ ಆರೋಪದ ಮೇಲೆ ಬಂಧಿತ ಬಾಂಗ್ಲಾದೇಶದ ವ್ಯಕ್ತಿಯ ಮುಖವು ನಟ ವಾಸಿಸುವ ಬಾಂದ್ರಾ ಪ್ರದೇಶದ ಸದ್ಗುರು ಶರಣ್ ಕಟ್ಟಡದ ಸಿಸಿಟಿವಿ ದಶ್ಯಗಳಲ್ಲಿ ಕಂಡುಬರುವ ವ್ಯಕ್ತಿಯೊಂದಿಗೆ ಹೊಂದಿಕೆಯಾಗಿದೆ ಎಂದು ಮುಖ ಗುರುತಿಸುವಿಕೆ ಪರೀಕ್ಷೆಯು ದಢಪಡಿಸಿದೆ ಎಂದು ನಗರ ಪೊಲೀಸರು ಕಳೆದ ತಿಂಗಳು ಹೇಳಿದ್ದರು.
ಜನವರಿ 16 ರ ಮುಂಜಾನೆ ಬಾಲಿವುಡ್ ತಾರೆಯ 12 ನೇ ಮಹಡಿಯ ಅಪಾರ್ಟ್ಮೆಂಟ್ಗೆ ನುಗ್ಗಿದ ಶರೀಫುಲ್, ದಶ್ಯದಿಂದ ಪರಾರಿಯಾಗುವ ಮೊದಲು ಸೈಫ್ ಅವರಿಗೆ ಆರು ಬಾರಿ ಇರಿದು ಪರಾರಿಯಾಗಿದ್ದ.