Thursday, May 2, 2024
Homeರಾಷ್ಟ್ರೀಯತೆರೆದ ಬಾವಿಗೆ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಬಚಾವ್

ತೆರೆದ ಬಾವಿಗೆ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಬಚಾವ್

ಜಾಮ್‍ನಗರ, ಫೆ.7 (ಪಿಟಿಐ) : ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ರಕ್ಷಿಸುವಲ್ಲಿ ಗುಜರಾತ್‍ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ಧಾರೆ. ಗುಜರಾತ್‍ನ ಜಾಮ್‍ನಗರ ಜಿಲ್ಲೆಯಲ್ಲಿ ಎರಡು ವರ್ಷದ ಬಾಲಕನೊಬ್ಬ 15 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಆರು ಗಂಟೆಗಳ ಕಾರ್ಯಾಚರಣೆಯ ನಂತರ ಜೀವಂತವಾಗಿ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಗೋವಾನಾ ಗ್ರಾಮದ ಕೃಷಿ ಭೂಮಿಯಲ್ಲಿ ಹೊಲದಲ್ಲಿ ಆಟವಾಡುತ್ತಿದ್ದ ರೈತನ ಎರಡು ವರ್ಷದ ಮಗು ತೆರೆದ ಬೋರ್‍ವೆಲ್‍ಗೆ ಬಾಲಕ ಬಿದ್ದಿದ್ದಾನೆ ಎಂದು ಜಾಮ್‍ನಗರ ಜಿಲ್ಲಾಧಿಕಾರಿ ಬಿ ಕೆ ಪಾಂಡ್ಯ ತಿಳಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡಗಳು ಸತತ ಆರು ಗಂಟೆಗಳ ಕಾರ್ಯಚರಣೆ ನಡೆಸಿ ಮಗುವನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ಬೋರ್‍ವೆಲ್‍ಗೆ ಆಮ್ಲಜನಕವನ್ನು ಪೂರೈಸಿದರು ಮತ್ತು ಮಗುವನ್ನು ತಲುಪಲು ಸಮಾನಾಂತರ ಹೊಂಡವನ್ನು ಅಗೆಯುವ ಮೂಲಕ ಮಗುವನ್ನು ಹೊರ ತರಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಬಾಲಕನನ್ನು ಹೊರ ತೆಗೆಯಲಾಯಿತು. ಕೂಡಲೇ ಅವರನ್ನು ಜಾಮ್‍ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇತ್ತೀಚಿನ ಘಟನೆಯೊಂದಿಗೆ, ತೆರೆದ ಮತ್ತು ಕೈಬಿಟ್ಟ ಬೋರ್‍ವೆಲ್‍ಗಳಿಂದ ಉಂಟಾಗುವ ಅಪಾಯಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಕ್ಸಲರ ಓಡಾಟ, ಹೈಅಲರ್ಟ್ ಘೋಷಣೆ

ಇದಕ್ಕೂ ಮುನ್ನ ಜನವರಿ 1 ರಂದು ಗುಜರಾತ್‍ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಬೋರ್‍ವೆಲ್‍ಗೆ ಬಿದ್ದು ಸಾವನ್ನಪ್ಪಿದ್ದಳು. ಕಳೆದ ವರ್ಷ ಜೂನ್‍ನಲ್ಲಿ ಜಾಮ್‍ನಗರ ಜಿಲ್ಲೆಯ ತಮಾಚನ್ ಗ್ರಾಮದಲ್ಲಿ ಎರಡು ವರ್ಷದ ಬಾಲಕಿ ಕಿರಿದಾದ ಬೋರ್‍ವೆಲ್‍ಗೆ ಜಾರಿ 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. 19 ಗಂಟೆಗಳ ಕಾಲ ಅನೇಕ ಏಜೆನ್ಸಿಗಳ ತೀವ್ರವಾದ ರಕ್ಷಣಾ ಪ್ರಯತ್ನಗಳ ಹೊರತಾಗಿಯೂ ಅವಳು ಸಾವನ್ನಪ್ಪಿದಳು. ಜುಲೈ 2022 ರಲ್ಲಿ, ಗುಜರಾತ್‍ನ ಸುರೇಂದ್ರನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ 12 ವರ್ಷದ ಬಾಲಕಿ ಬೋರ್‍ವೆಲ್‍ಗೆ ಬಿದ್ದು 60 ಅಡಿ ಆಳದಲ್ಲಿ ಸಿಲುಕಿಕೊಂಡಳು, ಆದರೆ ಸುಮಾರು ಐದು ಗಂಟೆಗಳ ನಂತರ ರಕ್ಷಿಸಲಾಯಿತು.

RELATED ARTICLES

Latest News