Friday, October 18, 2024
Homeಜಿಲ್ಲಾ ಸುದ್ದಿಗಳು | District Newsಯಗಚಿ ಡ್ಯಾಮ್‌ನಿಂದ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ, ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ

ಯಗಚಿ ಡ್ಯಾಮ್‌ನಿಂದ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ, ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ

ಬೇಲೂರು, ಜು.27- ತಾಲೂಕಿನಲ್ಲಿ ಹಾಗೂ ಯಗಚಿ ಜಲಾನಯನ ಪ್ರದೇಶದಲ್ಲಿ ಬಿಡುವಿಲ್ಲದೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಟ್ಟಣ ಸಮೀಪದ ಯಗಚಿ ಜಲಾಶಯಕ್ಕೆ ಒಳ ಅರಿವಿನ ಹೆಚ್ಚಾಗಿ, ಜಲಾಶಯದ 5 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ 2 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಮಳೆ ನಿರಂತರವಾಗಿ ಬಿಟ್ಟೂ ಬಿಟ್ಟು ತಾಲೂಕಿನಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವುದರಿಂದ ಮಲೆನಾಡು ಭಾಗದವರ ಸ್ಥಿತಿಯಂತೂ ಹೇಳುವ ಹಾಗೆಯೇ ಇಲ್ಲ.ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಅಲ್ಲದೆ ಮಲೆನಾಡು ಮತ್ತು ಯಗಚಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳ, ಕೊಳ್ಳಗಳು, ಕೆರೆ ಕಟ್ಟೆಗಳೆಲ್ಲ ತುಂಬಿ ಯಗಚಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೂ, ಜಲಾಶಯಕ್ಕೆ 2000 ಕ್ಯೂಸೆಕ್ಸ್ ನೀರು ಒಳ ಹರಿವಿದೆ. ಇದರಲ್ಲಿ ಬರುತ್ತಿರುವ ಎಲ್ಲ 2000 ಕ್ಯೂಸೆಕ್‌್ಸ ನೀರನ್ನು ಜಲಾಶಯದ 5 ಕ್ರಸ್ಟ್‌ ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.

ನದಿಯಲ್ಲಿ ನೀರು ರಭಸವಾಗಿ ಹೊರ ಹೋಗುತಿದ್ದು, ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕಿದೆ. ಜತೆಗೆ ಜಲಾಶಯದ ಗೇಟ್‌ಗಳಿಂದ ನೀರು ಬಿಟ್ಟಿರುವುದನ್ನು ನೋಡಲು ಸ್ಥಳೀಯರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತಿದ್ದು, ಜಲಾಶಯದ ಆವರಣ ಮೂಲ ಸೌಕರ್ಯಕ್ಕೆ ಅಧಿಕಾರಿಗಳು ಹೆಚ್ಚಿನ ಆಧ್ಯತೆ ನೀಡಬೇಕಿದೆ.

RELATED ARTICLES

Latest News