ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಗುರುತಿಸಿ ನೀಡಲಾಗುವ 2024ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲ್ಲೂಕಿನ ಪೊಲೀಸ್ ವೃತ್ತ ನಿರೀಕ್ಷಕ ( CPI) ವೈ.ಎಸ್.ಹನುಮಂತಪ್ಪ ಅವರು ಭಾಜನಾಗಿದ್ದಾರೆ. ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರ ಹೊರಡಿಸಿದ್ದಾರೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗುತ್ತದೆ. 2024ನೇ ಸಾಲಿನ ಸಿಎಂ ಪದಕ ವಿಜೇತರ ಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನರಸಗೊಂಡನಹಳ್ಳಿ ಗ್ರಾಮದ
ವೈ.ಎಂ ಶಾಂತರಾಜ್ ಹಾಗೂ ಸರಸ್ವತಮ್ಮ ಪುತ್ರನಾದ ಹನುಮಂತಪ್ಪ ಅವರು 2010 ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಗೊಂಡು ಇಲಾಖೆಗೆ ಸೇರ್ಪಡೆಯಾಗಿದ್ದರು.
ಮೈಸೂರಿನಲ್ಲಿ ತರಬೇತಿ ಮುಗಿಸಿದ ನಂತರ ತುಮಕೂರು ಜಿಲ್ಲೆ ಶಿರಾದಲ್ಲಿ ಕೆಲ ತಿಂಗಳ ಕಾಲ ಸೇವೆ ಸಲ್ಲಿಸಿದ್ದರು.
ಪ್ರೊಬೇಷನರಿ ಮುಗಿದ ಬಳಿಕ ಬಳ್ಳಾರಿ ನಗರದ ವಿವಿಧ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ ಕೆಲವು ತಿಂಗಳು ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ವಿಭಾಗ( ISD) ಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು.
ಪ್ರಸ್ತುತ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಪೊಲೀಸ್ ಠಾಣೆಯಲ್ಲಿ ವೃತ ಪೊಲೀಸ್ ನಿರೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದ 197 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2024ನೆ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಪ್ರಕಟಿಸಲಾಗಿದೆ.ಬೆಂಗಳೂರು ನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸಿ.ಕೆ.ಬಾವಾ, ಸಿಐಡಿ ಅಧೀಕ್ಷಕ ಡಾ.ಅನೂಪ್ ಶೆಟ್ಟಿ, ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರವಿಂದ ಎನ್.ಕಲಗುಜ್ಜಿ, ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಂಶುಕುಮಾರ್.
ಬೆಂಗಳೂರು ನಗರದ ಕೆಜಿ ಹಳ್ಳಿ ಎಸಿಪಿ ಪ್ರಕಾಶ ರಾಠೋಡ, ವೈಟ್ ಫೀಲ್ಡ್ ಉಪ-ವಿಭಾಗದ ಎಸಿಪಿರೀನಾ ಸುವರ್ಣಾ, ಎಸಿಪಿ, ಮಂಗಳೂರು ಉಪ-ವಿಭಾಗದ ಧನ್ಯ ಎನ್.ನಾಯಕ, ಮೈಸೂರಿನ ದೇವರಾಜ ಉಪ-ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಗೋಪಿ ಬಿ.ಆರ್. ವಿಜಯನಗರ ಜಿಲ್ಲೆಯ ರಾಮನಗೌಡ ಎ.ಹಟ್ಟಿ ಸೇರಿದಂತೆ ಒಟ್ಟು 197 ಮಂದಿ ಸಿಎಂ ಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.