Friday, November 22, 2024
Homeರಾಷ್ಟ್ರೀಯ | Nationalಹತ್ರಾಸ್‌‍ ಕಾಲ್ತುಳಿತ ದುರಂತ : ಎಫ್‌ಐಆರ್‌ನಲ್ಲಿ ಕಾಣಿಸಿಕೊಳ್ಳದ ಭೋಲೆ ಬಾಬಾನ ಹೆಸರು

ಹತ್ರಾಸ್‌‍ ಕಾಲ್ತುಳಿತ ದುರಂತ : ಎಫ್‌ಐಆರ್‌ನಲ್ಲಿ ಕಾಣಿಸಿಕೊಳ್ಳದ ಭೋಲೆ ಬಾಬಾನ ಹೆಸರು

ನವದೆಹಲಿ,ಜು.3- ಉತ್ತರ ಪ್ರದೇಶದ ಹತ್ರಾಸ್‌‍ನಲ್ಲಿ ನಿನ್ನೆ ಸಂಜೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 121 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಎಂದು ಕರೆಸಿಕೊಳ್ಳುವ ಸೂರಜ್‌ ಪಾಲ್‌ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ದೇವಮಾನವನ ಆಪ್ತ ಸಹಾಯಕ ಅಥವಾ ಮುಖ್ಯ ಸೇವಾದಾರ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ.ಸ್ಥಳೀಯ ಆಡಳಿತ ಮತ್ತು ಸಂಘಟಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 80,000 ಜನರಿಗೆ ಅನುಮತಿ ನೀಡಲಾಯಿತು, ಆದರೆ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಆಡಳಿತದಿಂದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಆದರೆ ಇತರ ವ್ಯವಸ್ಥೆಗಳನ್ನು ಸಂಘಟಕರು ಮಾಡಬೇಕಾಗಿತ್ತು ಎಂದು ಹತ್ರಾಸ್‌‍ ಜಿಲ್ಲಾ ವ್ಯಾಜಿಸ್ಟ್ರೇಟ್‌ ಆಶಿಶ್‌ ಕುಮಾರ್‌ ಹೇಳಿದರು. ಕಾಲ್ತುಳಿತದ ಮೊದಲು ಕ್ಲಿಪ್‌ಗಳಲ್ಲಿ ಜನರು ದೊಡ್ಡ ಶಾಮಿಯಾನದಲ್ಲಿ ಭೋಲೆ ಬಾಬಾರ ಮಾತುಗಳನ್ನು ಕೇಳುತ್ತಿದ್ದರು. ಸಿಂಹಾಸನದಂತಹ ಕುರ್ಚಿಯ ಮೇಲೆ ಅವರ ಮುಂದೆ ಬಾಬಾ ಕುಳಿತಿದ್ದರು.

ಪ್ರತ್ಯಕ್ಷದರ್ಶಿಗಳು ಸತ್ಸಂಗವು ಮುಗಿದ ನಂತರ, ಹಲವಾರು ಭಕ್ತರು ನಿರ್ಗಮನದ ಕಡೆಗೆ ಧಾವಿಸಿದರು, ಇತರರು ಬೋಧಕನು ನಡೆದಾಡಿದ ಮಣ್ಣನ್ನು ಸಂಗ್ರಹಿಸಲು ವಿರುದ್ಧ ದಿಕ್ಕಿನಲ್ಲಿ ಚಲಿಸಿದರು ಇದೇ ಕಾಲ್ತುಳಿತಕ್ಕೆ ಕಾರಣವಾಯಿತು ಎನ್ನಲಾಗಿದೆ.

ರಸ್ತೆಯ ಇನ್ನೊಂದು ಬದಿಯಲ್ಲಿ, ಬಾಬಾ ಅವರ ಕಾರಿನ ಹಿಂದೆ ನೀರು ಮತ್ತು ಕೆಸರು ತುಂಬಿದ ಹೊಲಗಳಲ್ಲಿ ಓಡುತ್ತಿದ್ದ ಗುಂಪನ್ನು ಸಂಘಟನಾ ಸಮಿತಿವರು ಕೋಲುಗಳಿಂದ ಬಲವಂತವಾಗಿ ತಡೆಯುತ್ತಿದ್ದರು ಇದರಿಂದಾಗಿ ಗುಂಪಿನ ಒತ್ತಡ ಹೆಚ್ಚುತ್ತಲೇ ಇತ್ತು ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಘಟನೆಯನ್ನು ಗಮನಿಸಿದ್ದು, ಅವರ ನಿರ್ದೇಶನದ ಮೇರೆಗೆ ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಮತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ. ಕೇಂದ್ರವು ಉತ್ತರ ಪ್ರದೇಶ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

RELATED ARTICLES

Latest News