Tuesday, May 13, 2025
Homeರಾಷ್ಟ್ರೀಯ | Nationalಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟ

ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟ

2025 CBSE class 12 exam results declared

ನವದೆಹಲಿ, ಮೇ 13– ಸಿಬಿಎಸ್‌ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದೆ. ಹುಡುಗಿಯರು ಶೇ 5 ರಷ್ಟು ಹೆಚ್ಚು ಅಂಕಗಳೊಂದಿಗೆ ಹುಡುಗರಿಗಿಂತ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.

ಈ ವರ್ಷ ಶೇಕಡಾ 88.39 ರಷ್ಟು ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಶೇಕಡಾ 87.98 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಹುಡುಗಿಯರು ಶೇಕಡಾ 91.64 ರಷ್ಟು ಉತ್ತೀರ್ಣರಾಗಿದ್ದರೆ, ಹುಡುಗರ ಪ್ರಮಾಣ ಶೇಕಡಾ 85.70 ರಷ್ಟಿದೆ.ತೃತೀಯಲಿಂಗ ಅಭ್ಯರ್ಥಿಗಳು ಕಳೆದ ವರ್ಷದ ಶೇಕಡಾ 50 ಕ್ಕೆ ಹೋಲಿಸಿದರೆ ಶೇಕಡಾ 100 ರಷ್ಟು ಉತ್ತೀರ್ಣರಾಗಿದ್ದಾರೆ.

ಒಟ್ಟು 1,11,544 ಅಭ್ಯರ್ಥಿಗಳು 90 ಪ್ರತಿಶತಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 24,867 ಅಭ್ಯರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 16,92,794 ಅಭ್ಯರ್ಥಿಗಳು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದರು.

RELATED ARTICLES

Latest News