ಚಿಕ್ಕಮಗಳೂರು,ನ.27-ಈ ಬಾರಿಯ ದತ್ತ ಜಯಂತಿ ಉತ್ಸವದ ಬಂದೋಬಸ್ತ್‌ಗೆ 5 ಸಾವಿರ ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಈ ಬಾರಿ ನಿಯೋಜಿಸಲಾಗುತ್ತಿದೆ. ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳ ಜೊತೆಗೆ ಸ್ಪೆಷಲ್ ಆಕ್ಷನ್ ೇರ್ಸ್, ರ್ಯಾಪಿಡ್ ಆಕ್ಷನ್ ೇರ್ಸ್ ಗಳಿಂದ ರೂಟ್ ಮಾರ್ಚ್ ಏರ್ಪಡಿಸಲಾಗುತ್ತದೆ. ಕಮಾಂಡೆಂಟ್ ಕಂಟ್ರೋಲ್ ವಾಹನ ಸಹ ಇರುತ್ತದೆ ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಮಾಲಾಧಾರಣೆ ನಡೆಯುತ್ತಿರುವ ಜೊತೆಗೆ ಜಿಲ್ಲೆಯ ವಿವಿಧೆಡೆ ಒಟ್ಟು 40 ಕ್ಕಿಂತ ಹೆಚ್ಚು ಸಂಕೀರ್ತನಾ ಯಾತ್ರೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಬಂದೋಬ್ತ್ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ದತ್ತ ಜಯಂತಿ ನಡೆಯುವ ಡಿ. 4 ರಂದು ಬೆಳಗ್ಗೆ 6 ಗಂಟೆಯಿಂದ ಭಕ್ತರನ್ನು ಪೀಠಕ್ಕೆ ಬಿಡಲಾಗುವುದುದು. ಮಧ್ಯಾಹ್ನ 2 ಗಂಟೆ ನಂತರ ಪೀಠಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಭಕ್ತರು ಹಿಂದಿರುಗುವ ವೇಳೆ ವಾಹನ ದಟ್ಟಣೆ ಉಂಟಾಗಬಾರದು ಎನ್ನುವುದು ಇದರ ಉದ್ದೇಶ ಎಂದರು.
ಈ ಬಾರಿ ಬಂದೋಬ್ತ್ ಕಾರ್ಯಕ್ಕೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಎಎನ್‌ಎ್‌ಗೆ ಸೇರಿದ ಒಟ್ಟು 15 ಕ್ಕೂ ಹೆಚ್ಚು ಡ್ರೋಣ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಒಟ್ಟು 28 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುತ್ತಿದ್ದು, ನ. 30 ರಿಂದಲೇ ಕಾರ್ಯಾರಂಭ ಮಾಡಲಿವೆ. ಸೂಕ್ತ ಮೂಲ ಸೌಕರ್ಯ, ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಹಗಲು, ರಾತ್ರಿ ಕಣ್ಗಾವಲು ಇರುತ್ತದೆ ಎಂದು ತಿಳಿಸಿದರು.
ನಮ ಜಿಲ್ಲೆಯ ಗಡಿ ಹಂಚಿಕೊಂಡಿರುವ 8 ಜಿಲ್ಲೆಗಳ ಎಸ್ಪಿಯವರ ಜೊತೆ ಮಾತನಾಡಿದ್ದೇವೆ. ಅವರು ತಮ ವ್ಯಾಪ್ತಿಯ ಗಡಿಯಲ್ಲಿ ಕೌಂಟರ್ ಚೆಕ್‌ಪೋಸ್ಟ್‌ಗಳನ್ನು ತೆರೆಯಲಿದ್ದಾರೆ ಎಂದರು.
ದತ್ತಪೀಠದ ಗುಹೆ, ಹೊರಭಾಗ ಸೇರಿದಂತೆ ನಗರ ಹಾಗು ಜಿಲ್ಲೆಯಾಧ್ಯಂತ ಒಟ್ಟು 39 ಸ್ಪೆಷಲ್ ಎಕ್ಸಿಕ್ಯೂಟಿವ್ ವ್ಯಾಜಿಸ್ಟೇಟರುಗಳನ್ನು ನೇಮಿಸಲಾಗುತ್ತಿದೆ. ನಗರದಲ್ಲಿ ನಡೆಯುವ ಶೋಭಾ ಯಾತ್ರೆವೇಳೆ ನಗರಸಭೆಯಿಂದ ಕೆಇಬಿ ಸರ್ಕಲ್‌ನಿಮದ ಆಜಾದ್ ಪಾರ್ಕ್ ವರೆಗೆ ಒಟ್ಟು 20 ವಾಚ್ ಟವರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಜಿಲ್ಲಾಡಳಿತ ಏನೇ ಕ್ರಮಗಳನ್ನು ಕೈಗೊಂಡರೂ ಅದು ಭಕ್ತಾಧಿಗಳ ಅನುಕೂಲಕ್ಕಾಗಿ ಆಗಿರುತ್ತದೆ ಎಂದು ಹೇಳಿದರು.ಈಗಾಗಲೆ ಎರಡೂ ಕೋಮಿನ ಸಂಘಟಕರ ಶಾಂತಿ ಸಭೆ ನಡೆಸಿ ಸಹಕಾರ ಕೋರಲಾಗಿದೆ. ಬಂದೋಬ್ತ್ ಸಂಬಂಧ ರಾಜ್ಯದ ಡಿಜಿ ಮತ್ತು ಐಜಿಪಿ ಹಾಗೂ ಎಡಿಜಿಪಿ ಅವರುಗಳು ನಗರಕ್ಕೆ ಭೇಟಿ ನೀಡಿ ವಿವರವಾಗಿ ಪರಿಶೀಲಿಸಿ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಕಣ್ಗಾವಲಿರಿಸಲಿದ್ದೇವೆ. ಎಲ್ಲಾ ಸಮುದಾಯಗಳು ಇದನ್ನು ಗಮನಿಸಬೇಕು ಎಂದರು.
ಬಹಿರಂಗ ಸಭೆ, ಇನ್ನಿತರೆ ಸಂದರ್ಭದಲ್ಲಿ ದ್ವೇಷ ಭಾಷಣಗಳು, ಹೇಳಿಕೆಗಳನ್ನು ನೀಡುವಂತಿಲ್ಲ. ಭಾವನೆಗಳನ್ನು ಕೆರಳಿಸುವಂತಿಲ್ಲ. ಬ್ಯಾನರ್, ಬಂಟಿಂಗ್, ಕಟೌಟ್ ಕಟ್ಟುವಾಗ ಕಡ್ಡಾಯವಾಗಿ ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಇದ್ದರು.
