ಗುರುಗ್ರಾಮ,ನ.27-ಇಡಿ ಅಧಿಕಾರಿಗಳೆಂದು ಸಂಚಾರ ಪೊಲೀಸರಿಂದ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿ ಬಂಧಿಸಲಾಗಿದೆ.ಬಂಧಿತ ಆರೋಪಿಗಳನ್ನು ಹರಿಯಾಣದ ಚರ್ಕಿ ದಾದ್ರಿ ನಿವಾಸಿ ದೀಪಕ್ (45) ಮತ್ತು ನೇಪಾಳದಲ್ಲಿ ವಾಸಿಸುವ ನಿತಿನ್ ಕುಮಾರ್ (50) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಒಬ್ಬ ಆರೋಪಿಯ ವಿರುದ್ಧ ಅತ್ಯಾಚಾರ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮೇಫೀಲ್‌್ಡ ಗಾರ್ಡನ್ ಸಂಚಾರ ಸಿಗ್ನಲ್‌ನಲ್ಲಿ ನಿಯೋಜಿಸಲಾದ ಸಂಚಾರ ಪೊಲೀಸ್ ಸಿಬ್ಭಂದಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಅ.15ರ ಸಂಜೆ, ಇಬ್ಬರು ಆರೋಪಿಗಳು ಕಾರಿನಲ್ಲಿ ಬಂದು ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂಧಿ ಬಳಿ ತಮನ್ನು ಜಾಗೃತ ದಳದ ಅಧಿಕಾರಿಗಳೆಂದು ಗುರುತಿಸಿಕೊಂಡರು. ನಂತರ ಅವರನ್ನು ಪೊಲೀಸ್ ಬೂತ್‌ಗೆ ಕರೆದುಕೊಂಡು ಹೋಗಿ ನಿಮ ವಿರುದ್ಧ ದೂರುಗಳಿವೆ ಎಂದು ಹೇಳಿ ಹಣದ ಬೇಡಿಕೆ ಇಟ್ಟಿದ್ದರು.ಬೆದರಿಕೆ ವಿಡಿಯೋ ತೋರಿಸಿ ಅವರ ಬಳಿ ಇದ್ದ ಹಣ ಸುಲಿಗೆ ಮಾಡಲಾಗಿತ್ತು. ಪ್ರಸ್ತುತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
