ಹುಬ್ಬಳ್ಳಿ,ನ.27-ವಿದ್ಯುತ್ ಶಾಕ್ ತಗುಲಿ ಯುವತಿ ಪ್ರಾಣ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ. ಮೇಘನಾ (24) ಮೃತ ದುರ್ದೈವಿ. ಮನೆಯಲ್ಲಿ ಹಾಕಿದ್ದ ಮೋಟಾರ್ ಆಫ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ತಗುಲಿದ ಪರಿಣಾಮ ಮೇಘನಾ ತೀವ್ರ ಅಸ್ವಸ್ಥಗೊಂಡಿದ್ದಾಳೆ.
ಕೂಡಲೇ ಮೇಘನಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾಳೆ. ಮೇಘನಾ ಸಾವಿನಿಂದ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
