Thursday, November 27, 2025
Homeಜಿಲ್ಲಾ ಸುದ್ದಿಗಳುಕೊಪ್ಪಳ : ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ

ಕೊಪ್ಪಳ : ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ

Koppal: Class 10 student gives birth to baby in hostel

ಕೊಪ್ಪಳ,ನ.27-ಇಲ್ಲಿನ ಸರ್ಕಾರಿ ಹಾಸ್ಟೆಲ್‌ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಪೋಷಕರು ಹಾಸ್ಟೆಲ್‌ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ದ್ದಿದ್ದು ಪ್ರಸ್ತುತ ಪೊಲೀಸರು ಇದಕ್ಕೆ ಕಾರಣನಾದ ಆರೋಪಿ ಮತ್ತು ವಾರ್ಡನ್‌ನನ್ನುಬಂಧಿಸಿದ್ದಾರೆ.

ಬಾಲಕಿಗೆ ಬೆಳಗಿನ ಜಾವ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಸುಮಾರು 6 ಗಂಟೆ ವಸತಿ ಗೃಹದಲ್ಲೇ ಗಂಡುಮಗುವಿಗೆ ಜನ ನೀಡಿದ್ದಾಳೆ.ಇದರಿಂದ ಹಾಸ್ಟಲ್‌ನ ಸಿಬ್ಬಂದಿ ಗಾಬರಿಗೊಂಡು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬಳಿಕ ತಾಯಿ- ಶಿಶುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಬಾಲಕಿ ಗರ್ಭ ಧರಿಸಿದ್ದು ವಾರ್ಡನ್‌ ಮತ್ತು ಹಾಸ್ಟೆಲ್‌ನ ಇತರ ಸಿಬ್ಬಂದಿ ಗಮನಕ್ಕೆ ಇಷ್ಟು ಸಮಯಗಳಿಂದ ಏಕೆ ಬಂದಿಲ್ಲ ಎಂದು ಆಕೆಯ ಪೋಷಕರು ಮತ್ತು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಹಾಸ್ಟೆಲ್‌ ಅಧಿಕಾರಿಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿದಿದ್ದರೂ ಅದರ ಬಗ್ಗೆ ಮೌನವಾಗಿದ್ದರು ಎಂದು ಆರೋಪಿಸಲಾಗಿದೆ.ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಲ್‌ ಮತ್ತು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ರಾಮ್‌ ಅರಸಿದ್ದಿ ಆಸ್ಪತ್ರೆಗೆ ಧಾವಿಸಿ ಬಾಲಕಿಯ ಆರೋಗ್ಯದ ಬಗ್ಗೆ ವಿಚಾರಿಸಿದರು. ಕುಕನೂರ್‌ ಪೊಲೀಸರು ತ್ವರಿತ ವಿಚಾರಣೆ ನಡೆಸಿ, ಬಾಲಕಿಯ ಗರ್ಭಧಾರಣೆಗೆ ಕಾರಣನೆಂದು ಶಂಕಿಸಲಾದ ಯುವಕನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸವರಾಜ ರಾಯರಡ್ಡಿ, ಇದೊಂದು ಪೊಕ್ಸೋ ಪ್ರಕರಣವಾಗಿದ್ದು, ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಆರೋಪಿ ಯುವಕನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಹಾಗೂ ವಸತಿ ನಿಲಯದ ವಾರ್ಡನ್‌ನನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.

RELATED ARTICLES

Latest News