Thursday, November 27, 2025
Homeರಾಜ್ಯಮಹಾಬಳೇಶ್ವರ ಸೈಲ್ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ

ಮಹಾಬಳೇಶ್ವರ ಸೈಲ್ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ

Mahabaleshwar Sail to be conferred with Kuvempu National Award

ಬೆಂಗಳೂರು, ನ.26– ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಕೊಂಕಣಿ ಭಾಷೆಯ ಪ್ರಸಿದ್ಧ ಬರಹಗಾರರಾದ ಮತ್ತು ಸರಸ್ವತಿ ಸನಾನ್‌ ಪ್ರಶಸ್ತಿ ಪುರಸ್ಕೃತರಾದ ಮಹಾಬಳೇಶ್ವರ ಸೈಲ್‌ ಅವರು ಭಾಜನರಾಗಿದ್ದಾರೆ.

ಕುವೆಂಪು ಅವರ ಜನ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.29ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಅಂದು ಮಹಾಬಳೇಶ್ವರ ಸೈಲ್‌ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದು ಕುವೆಂಪು ರಾಷ್ಟ್ರೀಯ ಪುರಸ್ಕಾರವಾಗಿದ್ದು, 5 ಲಕ್ಷ ರೂ. ನಗದು, ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಹಾಗೂ ಫಲ ತಾಂಬೂಲವನ್ನು ಒಳಗೊಂಡಿರುತ್ತದೆ.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎಲ್‌‍. ಶಂಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಶ್ರೀಯುತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೊಂಕಣಿ ಭಾಷಾ ಸಾಹಿತಿ, ಶಾ.ಮಂ. ಕೃಷ್ಣರಾಯ, ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಅವರು ಸಮಿತಿಯಲ್ಲಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಸಮಿತಿಯ ಸಂಚಾಲಕರಾಗಿದ್ದರು.

ಪ್ರಶಸ್ತಿ ಪುರಸ್ಕೃತರ ಪರಿಚಯ:
ಮಹಾಬಖಳೇಶ್ವರ ಸೈಲ್‌ ಅವರು ಭಾರತೀಯ ಸೇನೆಯಲ್ಲಿದ್ದು, 1965ರ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು. ಅಲ್ಲದೇ ಇಸ್ರೇಲ್‌ ಮತ್ತು ಈಜ್ಟಿ್‌ ನಡುವಿನ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನಾ ನಿವೃತ್ತಿಯ ನಂತರ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಕೊಂಕಣಿಯ ಪ್ರಖ್ಯಾತ ಲೇಖಕರು, ಅನುವಾದಕರೂ ಆಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಸೈಲ್‌ ಅವರ ಕಾದಂಬರಿ ಹಾವಟಣ್‌ಗಾಗಿ ಸರಸ್ವತಿ ಸನಾನ್‌ ಪ್ರಶಸ್ತಿಯೂ ದೊರೆತಿದೆ.

ಮಹಾಬಳೇಶ್ವರ ಸೈಲ್‌ ಅವರು 1943 ರ ಆಗ್ಟ್‌‍ 4 ರಂದು ಉತ್ತರ ಕನ್ನಡ ಜಿಲ್ಲೆಯ ಮಜಾಲಿ ಪ್ರದೇಶದ ಶೆಜೆಬಾಗ್‌ ಗ್ರಾಮದಲ್ಲಿ ಜನಿಸಿದರು. 8ನೇ ತರಗತಿಗೆ ವಿದ್ಯಾಬ್ಯಾಸವನ್ನು ನಿಲ್ಲಿಸಿ ನಂತರ ಸೇನೆ ಸೇರಿದರು. ಇವರು ದ್ವಿಭಾಷಾ ಲೇಖಕರಾಗಿದ್ದು, ಕೊಂಕಣಿ ಮತ್ತು ಮರಾಠಿ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ.

RELATED ARTICLES

Latest News