ವಾಷಿಂಗ್ಟನ್,ನ.27-ಅಮೆರಿಕದ ರಾಜಧಾನಿ ವಾಷಿಂಗ್‌ಟನ್‌ನ ಶ್ವೇತಭವನದ ಬಳಿ ಅಪರಿಚಿತ ದುಷ್ಕರ್ಮಿಗಳು ಇಬ್ಬರು ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿದಾರೆ.
ಇದು ಭಯೋತ್ಪಾದನಾ ಕೃತ್ಯ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘಟನೆಯನ್ನು ಖಂಡಿಸಿದ್ದಾರೆ. ಫ್ಲೋರಿಡಾದಲ್ಲಿ ಮಾತನಾಡಿದ ಅವರು, ದಾಳಿಯನ್ನು ಘೋರ, ದುಷ್ಟ ಮತ್ತು ದ್ವೇಷದ ಕೃತ್ಯ ಎಂದು ಕರೆದಿದ್ದಾರೆ. ಇದಕ್ಕೆ ಕಾರಣವಾದವರು ತುಂಬಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದ ವಾಯುವ್ಯದಲ್ಲಿ ಈ ದಾಳಿ ಸಂಭವಿಸಿದೆ. ಅಲ್ಲಿ ಇಬ್ಬರು ಪಶ್ಚಿಮ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರನ್ನು ಮೆಟ್ರೋ ನಿಲ್ದಾಣದ ಬಳಿ ಹೊಂಚು ಹಾಕಿ ದಾಳಿ ಮಾಡಲಾಗಿದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ಹೇಳಿದ್ದಾರೆ.
ಅಧಿಕಾರಿಗಳು ಶಂಕಿತನನ್ನು ವಶಕ್ಕೆ ಪಡೆದಿದ್ದು ಈತ ಆಫ್ಘಾನಿಸ್ತಾನ ಪ್ರಜೆ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಿದ್ದಾರೆ, ಈತ ಸೆಪ್ಟೆಂಬರ್ 2021 ರಲ್ಲಿ ಅಮೆರಿಕ ಪ್ರವೇಶಿಸಿದ್ದ ಎಂದು ಪತ್ತೆ ಮಾಡಲಾಗಿದೆ ಮತ್ತು ತನಿಖಾಧಿಕಾರಿಗಳು ಇನ್ನೂ ಆತನ ಹಿನ್ನೆಲೆ ಮತ್ತು ಉದ್ದೇಶದ ವಿವರಗಳನ್ನು ದೃಢಪಡಿಸುತ್ತಿದ್ದಾರೆ.
ಶಂಕಿತ ಈ ಭೂಮಿ ಮೇಲಿನ ಅತ್ಯಂತ ನರಕ ದೇಶ ಆಫ್ಘಾನಿಸ್ತಾನದಿಂದ ನಮ ದೇಶಕ್ಕೆ ಬಂದಿದ್ದಾನೆ ಎಂದು ಟಂಪ್ ಹೇಳಿದರು.ಆಗಸ್ಟ್‌ನಲ್ಲಿ 300 ಕ್ಕೂ ಹೆಚ್ಚು ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರನ್ನು ವಾಷಿಂಗ್ಟನ್‌ಗೆ ನಿಯೋಜಿಸಲಾಗಿತ್ತು. ಕಳೆದ ವಾರ, ಅವರಲ್ಲಿ ಸುಮಾರು 160 ಜನರು ವರ್ಷದ ಅಂತ್ಯದವರೆಗೆ ತಮ್ಮ ನಿಯೋಜನೆಯನ್ನು ವಿಸ್ತರಿಸಲು ಸ್ವಯಂಪ್ರೇರಿತರಾದರು, ಇತರರು ಕೇವಲ ಒಂದು ವಾರದ ಹಿಂದೆ ಪಶ್ಚಿಮ ವರ್ಜೀನಿಯಾಕ್ಕೆ ಮರಳಿದರು.
ನಮ ಗ್ರೇಟ್ ನ್ಯಾಷನಲ್ ಗಾರ್ಡ್ ಮತ್ತು ನಮ ಎಲ್ಲಾ ಮಿಲಿಟರಿ ಮತ್ತು ಕಾನೂನು ಜಾರಿ ಸಂಸ್ಥೆ ವೀರರಿಗೆ ದೇವರು ಆಶೀರ್ವದಿಸಲಿ. ಇವರು ನಿಜವಾಗಿಯೂ ಮಹಾನ್ ಜನರು ಎಂದು ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ.
