ಮುಂಬೈ, ನ. 27- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸತಿ ಮಂಧಾನ ಅವರ ಮದುವೆ ಮುರಿದು ಬೀಳುವ ಸಾಧ್ಯತೆಗಳಿವೆ.ಮಂಧಾನ ಕೈ ಹಿಡಿಯಬೇಕಿದ್ದ ಖ್ಯಾತ ಸಂಗೀತ ನಿರ್ದೇಶಕ ಪಾಲಶ್ ಮುಚ್ಚಲ್ ಅವರು ಈ ಹಿಂದೆ ಬೇರೊಂದು ಯುವತಿಗೂ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ ಈ ಮದುವೆ ಮುರಿದು ಬೀಳುವ ಸಾಧ್ಯತೆಗಳು ಗೋಚರಿಸುತ್ತಿವೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನ.23ರಂದೇ ಸ್ಮೃತಿ-ಪಾಲಶ್ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದರೆ ಆಗಿದ್ದೇ ಬೇರೆ. ಮದುವೆಗೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಮಂಧಾನ ತಂದೆಗೆ ಲಘು ಹೃದಯಾಘಾತವಾಗಿತ್ತು. ಅವರು ಸಂಪೂರ್ಣ ಗುಣಮುಖರಾಗುವವರೆಗೆ ಮದುವೆ ಸಮಾರಂಭ ಮುಂದೂಡಲು ಸತಿ ನಿರ್ಧರಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೆ ಮಂಧಾನ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಪಾಲಶ್ ಹಾಗೂ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಪಾಲಶ್ ತನ್ನ ಎಕ್‌್ಸ ಗರ್ಲ್‌ಫ್ರೆಂಡ್ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಅವರಿಗೆ ಪ್ರಪೋಸ್ ಮಾಡಿದ್ದ ಫೋಟೋಗಳು ಹಾಗೂ ಆಕೆಯೊಂದಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಪೋಟೋಗಳನ್ನು 2017ರಲ್ಲಿ ತೆಗೆಸಿದ ಫೋಟೋಗಳು ಎನ್ನಲಾಗಿದೆ.
ಒಂದು ಫೋಟೋದಲ್ಲಿ ಮಂಧಾನಗೆ ಪ್ರಪೋಸ್ ಮಾಡಿದ ರೀತಿಯಲ್ಲೇ ಶಾ ಅವರಿಗೂ ಪ್ರಪೋಸ್ ಮಾಡಿದ್ದಾರೆ ಪಾಲಶ್, ಮತ್ತೊಂದು ಫೋಟೋದಲ್ಲಿ ಆಕೆಯನ್ನು ಬೆನ್ನಮೇಲೆ ಹೊತ್ತುಕೊಂಡಿದ್ದಾರೆ.2019ರಿಂದ ಪ್ರೀತಿಯಲ್ಲಿರುವ ಮಂಧಾನ ಮತ್ತು ಪಾಲಶ್ ಮುಚ್ಚಲ್ 2024ರಲ್ಲಿ ತಮ್ಮ ಪ್ರೀತಿಯನ್ನ ಬಹಿರಂಗಪಡಿಸಿದ್ದರು. ಇತ್ತೀಚಿಗೆ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಾಲಶ್ ಮಂಧಾನಗೆ ಪ್ರಪೋಸ್ ಕೂಡ ಮಾಡಿದ್ದರು.
ಮಂಧಾನಗೆ ಪಾಲಶ್ ಮೋಸ ಮಾಡಿದ್ದಾರಾ? ಇದೇ ವಿಷಯಕ್ಕೆ ಮದುವೆ ಮನೆಯಲ್ಲಿ ರಾದ್ಧಾಂತವಾಗಿರಬಹುದಾ? ಎಂಬ ಚರ್ಚೆ ಜೋರಾಗಿದೆ. ಇನ್ನೂ ವೈರಲ್ ಫೋಟೋಗಳ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
