ಕೊಚ್ಚಿ ,ಜ.31-ಕೇರಳದ ಕೊಚ್ಚಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ 27 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರ್ ಪ್ರದೇಶದಲ್ಲಿ ಎರ್ನಾಕುಲಂ ಗ್ರಾಮಾಂತರ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದ ಒಳಗೆ ಅಕ್ರಮವಾಗಿ ನುಸಿಳಿದ ಬಂದ ಬಾಂಗ್ಲಾದೇಶಿ ಪ್ರಜೆಗಳು ನಾವು ಪಶ್ಚಿಮ ಬಂಗಾಳದವರೆಂದು ಹೇಳೕಕೊಂಡು ವಲಸೆ ಕಾರ್ಮಿಕರ ಸೋಗಿನಲ್ಲಿ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು.
ಬಂಧಿತರನ್ನು ವಿಚಾರಣೆ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಳೆದ ಎರಡು ವಾರಗಳ ಹಿಂದೆ 28 ವರ್ಷದ ತಸ್ಲಿಮಾ ಬೇಗಂ ಎಂಬಾಕೆಯನ್ನು ಬಂಧಿಸಿದ ನಂತರ ಎರ್ನಾಕುಲಂ ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ಅವರು ಪ್ರಾರಂಭಿಸಿದ ವಿಶೇಷ ಕಾರ್ಯಾಚರಣೆಯ ಆಪರೇಷನ್ ಕ್ಲೀನ್‌ನ ಭಾಗವಾಗಿ ಇವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.