ಭಾವನಗರ, ಸೆ.27– ಹೊಳೆಯ ಪ್ರವಾಹಕ್ಕೆ ಸಿಲುಕಿದ್ದ ಬಸ್ನಿಂದ ತಮಿಳುನಾಡು ಮತ್ತು ಪುದುಚೇರಿಯ 27 ಯಾತ್ರಿಗಳು ಸೇರಿದಂತೆ 29 ಜನರನ್ನು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಗುಜರಾತ್ನ ಭಾವನಗರ ಜಿಲ್ಲೆಯ ಕೊಲಿಯಾಕ್ ಗ್ರಾಮದ ಬಳಿ ನಡೆದಿದೆ.
ಕಳೆದ ರಾತ್ರಿ 7 ಗಂಟೆ ಸಂದರ್ಭದಲ್ಲಿ ಕೊಲಿಯಾಕ್ ಗ್ರಾಮದ ಬಳಿಯ ಹೊಳೆಯ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಸ್ ಸಿಕ್ಕಿಹಾಕಿಕೊಂಡಿತ್ತು ಸುಮಾರು ಎಂಟು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಆರ್.ಕೆ.ಮೆಹ್ತಾ ತಿಳಿಸಿದ್ದಾರೆ.
ಯಾತ್ರಾರ್ಥಿಗಳು ಕೊಲಿಯಾಕ್ಗ್ರಾಮದ ಸಮೀಪವಿರುವ ನಿಷ್ಕಲಂಕ್ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಭಾವನಗರ ನಗರದ ಕಡೆಗೆ ಹೊರಟರು. ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನದಿಯ ಕಾಲುದಾರಿ ಮುಳುಗಿದೆ. ಅದರ ಹೊರತಾಗಿಯೂ, ಬಸ್ ಚಾಲಕ ನದಿ ದಾಟಲು ನಿರ್ಧರಿಸಿದ್ದ,ಆದರೆ, ನೀರಿನ ರಭಸಕ್ಕೆ ಬಸ್ನ ಮುಂಭಾಗ ನದಿಗೆ ಮೊಗಚಿತ್ತು .
ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು ತಕ್ಷಣ ಕಾರ್ಯಾಚರಣೆಯ ನಡೆಸಿದ ರಕ್ಷಣಾ ಸಿಬ್ಬಂದಿ ಸ್ಥಳವನ್ನು ತಲುಪಿ ಬಸ್ನಿಂದ ಎಲ್ಲಾ 27 ಯಾತ್ರಾರ್ಥಿಗಳು ಮತ್ತು ಬಸ್ನ ಚಾಲಕ ಮತ್ತು ಕ್ಲೀನರ್ಗಳನ್ನು ಬಸ್ನ ಹಿಂದಿನ ಕಿಟಕಿಯ ಮೂಲಕ ಬೇರೊಂದು ವಾಹನಕ್ಕೆ ಸ್ಥಳಾಂತರಿಸಿದರು ಆದರೆ ಮುಂದೆ ಇನ್ನಷ್ಟು ಸವಾಲು ಎದುರಾಯಿತು ಎಲ್ಲಾ 29 ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಕೂಡ ಕಾಸ್ವೇಯಲ್ಲಿ ಸಿಲುಕಿಕೊಂಡಿದೆ.
ನಂತರ ಒಂದು ದೊಡ್ಡ ಟ್ರಕ್ ಮೂಲಕ ವಾಹನದಲ್ಲಿ 29 ವ್ಯಕ್ತಿಗಳನ್ನು ವರ್ಗಾಯಿಸಿದ್ದೇವೆ. ಮುಂಜಾನೆ 3 ಗಂಟೆ ಸುಮಾರಿಗೆ, ಸುಮಾರು ಎಂಟು ಗಂಟೆಗಳ ನಂತರ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಯಿತು. ನಾವು ಅವರಿಗೆ ಭಾವನಗರದಲ್ಲಿ ವಸತಿ ಮತ್ತು ಊಟವನ್ನು ಒದಗಿಸಿದ್ದೇವೆ. ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದೇವೆ ,ಹೆಚ್ಚಿನ ಯಾತ್ರಿಕರು ಹಿರಿಯ ನಾಗರಿಕರು ಎಂದು ಜಿಲ್ಲಾಧಿಕಾರಿ ತಿಳಿಸಿದರು.